ತಾಪಂಗೆ ಆಯ್ಕೆ

Updated on: 

ತಿಪಟೂರು: ಶುಕ್ರವಾರ ನಡೆದ ತಾಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ನೇತ್ರಾವತಿ ಭಾಸ್ಕರ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕಲಾವತಿ ಬಾಬು ತಲಾ 5 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾತಿ ಪ್ರಕಟವಾಗಿದೆ. ಅದರಂತೆ ಈಡೇನಹಳ್ಳಿ ತಾ.ಪಂ. ಕ್ಷೇತ್ರದ ಸದಸ್ಯೆ (ಬಿಜೆಪಿ) ನೇತ್ರಾವತಿ ಭಾಸ್ಕರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇವರ ವಿರುದ್ಧ ನಾಗರಘಟ್ಟ ಕ್ಷೇತ್ರದ ಸದಸ್ಯ ರವಿ (ಜೆಡಿಎಸ್) ಸ್ಪರ್ಧಿಸಿದ್ದರು. ನೇತ್ರಾವತಿ ಭಾಸ್ಕರ್ ಅವರಿಗೆ 11ಮತಗಳು, ರವಿಯವರಿಗೆ 6 ಮತಗಳು ಲಭಿಸಿದ್ದರಿಂದ ನೇತ್ರಾವತಿ ಭಾಸ್ಕರ್ 5 ಮತಗಳ ಅಂತರದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಇದ್ದು, ಜೆಡಿಎಸ್ನ ಕಲಾವತಿಬಾಬು ಸ್ಪರ್ಧಿಸಿ, ಇವರ ವಿರುದ್ಧ ಹುಣಸೇಘಟ್ಟ ಕ್ಷೇತ್ರದ ಸದಸ್ಯೆ ನೇತ್ರಾವತಿ ದಯಾನಂದ್ (ಕಾಂಗ್ರೆಸ್) ಸ್ಪರ್ಧಿಸಿದ್ದರು. ಕಲಾವತಿ ಬಾಬು ಅವರಿಗೆ 11ಮತಗಳು ಲಭಿಸಿ, ನೇತ್ರಾವತಿ ದಯಾನಂದ್ಗೆ 6 ಮತಗಳು ಲಭಿಸಿದ್ದರಿಂದ ಕಲಾವತಿ ಬಾಬು 5 ಮತಗಳ ಅಂತರದಿಂದ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಸಿಂಧೂ ಕಾರ್ಯ ನಿರ್ವಹಿಸಿದರು. ಇಒ ದಿಬ್ಬದಮನಿ ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com