ಚಿಕ್ಕನಾಯಕನಹಳ್ಳಿ: ಬದಲಾದ ಹತ್ತನೇ ತರಗತಿಯ ಕನ್ನಡ ಪಠ್ಯ ಪುಸ್ತಕದ ನಿರಂತರ ಹಾಗೂ ವ್ಯಾಪಕ ಮೌಲ್ಯ ಮಾಪನ ಕುರಿತು ಪುನಶ್ಚೇತನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್ ತಿಳಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿ, ಜುಲೈ 15ರಂದು 10 ಗಂಟೆಗೆ ಕಾರ್ಯಾಗಾರ ಹಮ್ಮಿಕೊಂಡಿದ್ದು, ಸಂನ್ಮೂಲ ವ್ಯಕ್ತಿಗಳಾಗಿ ಪಾವಗಡ ತಾಲೂಕು ರಾಜವಂಶಿ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಜಯರಾಂ ರೂಪಾತ್ಮಕ ಸಂಕಲನಾತ್ಕಮ ಹಾಗೂ ವಾರ್ಷಿಕ ಟಿಪ್ಪಣಿ ಕುರಿತು 10ನೇ ತರಗತಿ ಪಾಠ ಪದ್ಧತಿ ಬಗ್ಗೆ ಉಪನ್ಯಾಸ ಮಾಡಲಿದ್ದಾರೆ. ಭೋಜನಾನಂತರ ಸಿ.ಸಿ.ಇ ಪರಿಷ್ಕರಣೆಯಂತೆ 8 ಮತು ್ತ9ನೇ ತರಗತಿಗಳಿಗೆ 1.30 ರಿಂದ 5.30ರವರಗೆ ಬೋಧನಾ ಕ್ರಮದ ಬಗ್ಗೆ ಉಪನ್ಯಾಸ. 2.2.2014ರ ಆದೇಶದಂತೆ 10 ನೇ ತರಗತಿಗೆ ಮತ್ತು ಪರೀಕ್ಷಾ ವಿಧಾನದ ಬಗ್ಗೆ 8 ಮತ್ತು 9ನೇ ತರಗತಿಗಳಿಗೆ ಬೋಧನಾ ಕ್ರಮದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸ್ಥಳ ಸರ್ಕಾರಿ ಪ್ರೌಢಶಾಲೆ ಯಳನಡುವಿನಲ್ಲಿ.