ತುಮಕೂರು: ಬಾಲಕಿಯರಿಗೆ ದೌರ್ಜನ್ಯಗಳು ನಡೆಯುವುದು ಕಂಡುಬಂದಾಗ ಅಂತಹುಗಳನ್ನು ಮೌನವಾಗಿ ಸ್ವೀಕರಿಸದೆ ಇತರರಿಗೆ ಹೇಳುವ ಮೂಲಕ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕೆಂದು ಡಾ.ಎಚ್.ಎಸ್. ಲಲಿತ ಕರೆ ನೀಡಿದರು.
ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ತುಮಕೂರು ವತಿಯಿಂದ ಹಮ್ಮಿಕೊಂಡಿರುವ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ದೌರ್ಜನ್ಯ ವಿರೋಧಿ ಸಪ್ತಾಹದ ಅಂಗವಾಗಿ ಚಿಕ್ಕಪೇಟೆಯ ಅತ್ತಿಮಬ್ಬೆ ಶಾಲೆಯಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡುತ್ತಿದ್ದರು.
ತುಮಕೂರು ನಗರ ಪೊಲೀಸ್ ಠಾಣೆಯ ಬಸವರಾಜು ಲೇಖಕಿ ಮಲ್ಲಿಕಾ ಬಸವರಾಜು ಮಾತನಾಡಿದರು. ವಕೀಲರಾದ ಎಸ್. ರಮೇಶ್ ಮಾತನಾಡಿ ಯಾವುದೇ ಮಕ್ಕಳಿಗೆ ಅಪಾಯ ಬಂದಾಗ ನಾಗರಿಕರು ರಕ್ಷಣೆ ಕೊಡುವಂತಾಗಬೇಕು. ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸದೆ ಅವರು ಸಮಾಜದಲ್ಲಿ ಸ್ಥಾನಮಾನ ಗಳಿಸುವ ಅವಕಾಶ ರೂಪಿಸಬೇಕು ಎಂದರು. ಹಿರಿಯ ಸಾಹಿತಿಗಳಾದ ಶಾಂತ ಸನ್ಮತಿ ಕುಮಾರ್, ವರದಕ್ಷಿಣೆ ವಿರೋಧಿ ವೇದಿಕೆಯ ಅನ್ನಪೂರ್ಣ ವೆಂಕಟನಂಜಪ್ಪ, ಬಾ.ಹ.ರಮಾಕುಮಾರಿ, ಎಂ.ಸಿ.ಲಲಿತ, ಮಮತಾ ರವಿಕುಮಾರ್, ಪಾರ್ವತಮ್ಮ ರಾಜಕುಮಾರ್, ಲಲಿತ ಮಲ್ಲಪ್ಪ, ರಾಜೇಶ್ವರಿ ಚಂದ್ರಶೇಖರ್, ಅಕ್ಕಮ್ಮ ಮುಂತಾದವರು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕರಾದ ದಯಾನರಸಿಂಹ ಸ್ವಾಗತಿಸಿ, ರೂಪ ನಿರೂಪಿಸಿದರು.