ಬೈಂದೂರು: ಇಲ್ಲಿನ ಕಂಬದಕೋಣೆ ಗ್ರಾಮದ ಮುಲ್ಲಿಮನೆ ಎಂಬಲ್ಲಿ ಜು. 30ರಂದು ನದಿಯಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆಯ ಶವ ಭಾನುವಾರ ಪತ್ತೆಯಾಗಿದೆ. ಮೃತರು ಪದ್ದು ಯಾನೆ ಪದ್ಮಾವತಿ (62) ಮೃತ ಮಹಿಳೆ. ಜು.30ರಂದು ಮಧ್ಯಾಹ್ನ ಮುಲ್ಲಿಮನೆ ಎಂಬಲ್ಲಿ ಹರಿಯುವ ನದಿಯ ನೆರೆ ನೀರಿನಲ್ಲಿ ಬಿದ್ದ ತನ್ನ ಮರದ ತೆಂಗಿನ ಕಾಯಿಗಳನ್ನು ಹೆಕ್ಕಿ ರಾಶಿ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿ ಹೋಗಿದ್ದರು. ಅವರ ಶವ ಭಾನುವಾರ ಬೆಳಗ್ಗೆ 9 ಗಂಟೆಗೆ ಕಿರಿಮಂಜೇಶ್ವರ ಗ್ರಾಮದ ಕೋಣ್ಕಣಿ ಎಂಬಲ್ಲಿನ ನದಿಬದಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ರಾಘವೇಂದ್ರ ಎಂಬವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement