ಸೀಸಂ ಕಟ್ಟಿಗೆ ವಶ: ಇಬ್ಬರ ಬಂಧನ

Updated on: 

ಯಲ್ಲಾಪುರ: ತಾಲೂಕಿನ ಇಡಗುಂದಿ ವಲಯ ವ್ಯಾಪ್ತಿಯ ಬಳಗಾರ ಅರಣ್ಯ ಪ್ರದೇಶದಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು ರು. 3 ಲಕ್ಷ ಮೌಲ್ಯದ ಸೀಸಂ ಕಟ್ಟಿಗೆಯನ್ನು ವಶ ಪಡಿಸಿಕೊಂಡಿರುವ ಅರಣ್ಯ ಇಲಾಖೆ ಸಿಬ್ಬಂದಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.  
ಭಾಸ್ಕರ್ ಕೃಷ್ಣ ಸಿದ್ದಿ (ಕಲವಾರೆತೆಗ್ಗು) ಹಾಗೂ ಶಂಕರ ಸುಬ್ಬಾ(ಬಾಬು) ಸಿದ್ದಿ ಅರಬೈಲ್ ಬಂಧಿತರು. ರಾಜೇಶ ಗಣಪತಿ ಗಾಂವಕರ ಕಳಸದಮಕ್ಕಿ ಸುಂಕಸಾಳ, ಮಾಬ್ಲು ಬೀರಪ್ಪ ಹರಿಕಂತ್ರ ಹಿಲ್ಲೂರು ಎಂಬುವರು ಪರಾರಿಯಾಗಿದ್ದಾರೆ.  
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಲಯಾರಣ್ಯಾಧಿಕಾರಿ ಕೆ.ಸಿ. ಆನಂದ, ಉಪ ವಲಯ ಅರಣ್ಯಾಧಿಕಾರಿ ಹುಲಸ್ವಾರ, ಶಿರಗಾವಿ, ನಂದನ, ಗಾವಡೆ, ತಳೇಕರ, ಧನಂಜಯ, ಅರಣ್ಯ ರಕ್ಷಕರಾದ ಲೋಕೇಶ, ರೇಷ್ಮಾ, ನಾಡಗೌಡ, ಸಿದ್ರಾಮಪ್ಪ, ಅರಣ್ಯ ಕಾವಲುಗಾರ ಮಡಿವಾಳ ಮತ್ತು ಶಿವಣ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com