ಹಳಿಯಾಳ: ಹಳಿಯಾಳ ನಾಮಧಾರಿ-ಆರ್ಯ ಈಡಿಗ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಇಲ್ಲಿಯ ವಿರಕ್ತ ಮಠದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಸಮಾಜ ಬಾಂಧವರು ಈಚೆಗೆ ವಿಜೃಂಭಣೆಯಿಂದ ಆಚರಿಸಿದರು. ಈ ಸಂದರ್ಭದಲ್ಲಿ ತಿರುಪತಿ ದೇವಸ್ಥಾನದ ಟ್ರಸ್ಟಿಗಳಾದ ಆರ್.ವಿ. ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೆಕರ ಮತ್ತು ಸ್ಥಳೀಯ ಶಾಸಕ ಸುನೀಲ್ ಹೆಗಡೆ ಹಾಗೂ ಸಮಾಜದ ಕರಾವಳಿ ಕಾವಲು ಪಡೆ ಕುಮಟಾದ ಸಿಪಿಐ ಶಿವಪ್ರಕಾಶ ನಾಯ್ಕ, ನಿವೃತ್ತ ಎಸಿಎಫ್ ಎನ್.ಎಂ. ನಾಯ್ಕ, ನಾಮಧಾರಿ ಸಂಘದ ದಾಂಡೇಲಿ ಅಧ್ಯಕ್ಷ ಎನ್.ವಿ.ನಾಯ್ಕ ಅವರನ್ನು ಸನ್ಮಾನಿಸಲಾಯಿತು.