ಸೌಲಭ್ಯ: ಯುವಜನತೆ ನಿರಾಸಕ್ತಿ

Updated on: 

ಕನ್ನಡಪ್ರಭ ವಾರ್ತೆ, ಹೊನ್ನಾವರ, ಫೆ. 11
ಯುವಜನ ಸೇವಾ ಇಲಾಖೆಯಡಿ ಯುವಜನರನ್ನು ಉತ್ತೇಜಿಸಿ ಸಕ್ರಿಯರಾಗಿಸುವಲ್ಲಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದರೆ ಅದನ್ನು ಪಡೆಯುವಲ್ಲಿ ಸಹ ಯುವಜನರು ನಿರಾಸಕ್ತರಾಗಿರುವುದಕ್ಕೆ ಶಾಸಕ ಜೆ.ಡಿ. ನಾಯ್ಕ ಕಳವಳ ವ್ಯಕ್ತಪಡಿಸಿದರು.
ಅವರು ಮಂಕಿ ತಾಳಮಕ್ಕಿಯ ಶ್ರೀದುರ್ಗಾದೇವಿ ರಂಗಮಂದಿರದಲ್ಲಿ  ದುರ್ಗಾದೇವಿ ಯುವಕ ಸಂಘದ ಆಶ್ರಯದಲ್ಲಿ ಹೊನ್ನಾವರ ತಾಲೂಕು ಮಟ್ಟದ ಯುವಜನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಮಂಕಿ ಗ್ರಾಮಕ್ಕೆ ಈವರೆಗೂ ಸಮಸ್ಯೆಯಾಗಿದ್ದ ನೀರು ಸರಬರಾಜು ಯೋಜನೆಯನ್ನು ಮತ್ತು ಮಂಕಿ ಪಟ್ಟಣದ 30 ಕಿ.ಮೀ. ರಸ್ತೆ ಕಾಮಗಾರಿಗೆ ಆರ್ಥಿಕ ಮಂಜೂರಿಯನ್ನು ಪಡೆದಿದ್ದು ಕಾಮಗಾರಿ ಅನುಷ್ಠಾನದಲ್ಲಿದೆ. 2 ಸಾವಿರಕ್ಕೂ ಹೆಚ್ಚು ಮನೆ ಮಂಜೂರಿ ಮಾಡಲಾಗಿದ್ದರೂ ಕೇವಲ 400 ಮನೆಗಳ ಫಲಾನುಭವಿಗಳು ಮಾತ್ರ ಈ ಯೋಜನೆಯ ನೆರವು  ಸಿಗಲಿದೆ.
ನೆರಳು ಭಾಗ್ಯ ಯೋಜನೆ: ಅರಣ್ಯ ಇಲಾಖೆ ಮತ್ತು ಅಧಿಕಾರಿಗಳ ಬಿಗು ನಿಲುವಿನಿಂದಾಗಿ ಕೆಂಪು ಕಲ್ಲು, ಜಲ್ಲಿಯ ಸಮಸ್ಯೆಯಿಂದಾಗಿ ಇತರ ಫಲಾನುಭವಿಗಳು ನಿಗದಿತ ಸಮಯದಲ್ಲಿ ಮನೆಗಳನ್ನು ಪೂರ್ಣಗೊಳಿಸಿಕೊಳ್ಳುವಲ್ಲಿ ಅಸಹಾಯಕರಾಗಿದ್ದಾರೆ. ಈ ಯೋಜನೆಯಿಂದ ವಂಚಿತರಾದ ಫಲಾನುಭವಿಗಳಿಗೆ ನೆರಳು ಭಾಗ್ಯ ಯೋಜನೆಯ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿರುವುದಾಗಿ ಅವರು ಹೇಳಿದರು. ರಾಜ್ಯ ಬಜೆಟ್ ಬಗ್ಗೆ ಪ್ರಸ್ತಾಪಿಸಿದ ಅವರು, ಕಳೆದ ಸಾಲಿನಲ್ಲಿ ಘೋಷಿಸಲಾದ ಯೋಜನೆಗಳಲ್ಲಿ ಶೇ. 40ರಷ್ಟು ಸಹ ಅನುಷ್ಠಾನಗೊಂಡಿಲ್ಲ. ಈ ಸಾರಿ ಬಜೆಟ್‌ನಲ್ಲಿ ಮೀನುಗಾರಿಕಾ ಬಂದರುಗಳ ಪ್ರಸ್ತಾವನೆ ಬಿಟ್ಟರೆ, ಜಿಲ್ಲೆಯ ಅಡಕೆ ಬೆಳಗಾರರ ಬಗ್ಗೆ, ಕೃಷಿಕರ ಸಾಲಮನ್ನಾ ಬಗ್ಗೆ ಪ್ರಸ್ತಾಪಗಳೇ ಇಲ್ಲ ಎಂದು ಹೇಳಿದರು.
ಬದುಕಿಗೆ ಹುಮ್ಮಸ್ಸು: ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ಹರ್ಷಿಣಿ ಚಂದ್ರಶೇಖರ ಗೌಡ ಮಾತಾಡಿ, ಜಾನಪದ ಕಲೆಗಳಲ್ಲಿ ಬದುಕಿಗೆ ಹುಮ್ಮಸ್ಸು ನೀಡುವ ಶಕ್ತಿಯಿದೆ. ಜನಪದದಲ್ಲಿ  ಜನಜೀವನದ ಪ್ರೇರಣ ಶಕ್ತಿಯಿದೆ. ಹಿಂಸೆ, ಕ್ರೌರ್ಯ, ದುಶ್ಚಟ, ಭಯೋತ್ಪಾದನೆಯಂಥ ಚಟುವಟಿಕೆಯಿಂದ ವಿಮುಖವಾಗಿ ಆರೋಗ್ಯಕರ ಸಮಾಜಮುಖಿಯಾಗಿಸುವಲ್ಲಿ ಇಂಥ ಕಲಾ ಪ್ರಕಾರಗಳು ಸಹಕಾರಿಯಾಗಿವೆ ಎಂದರು. ಜಿಪಂ ಸದಸ್ಯೆ ವನಿತಾ ಅಣ್ಣಪ್ಪ ನಾಯ್ಕ, ಜಿಪಂ ಸದಸ್ಯ ಕೃಷ್ಣ ಗೌಡ, ತಾಪಂ ಸದಸ್ಯರಾದ ರಾಜು ನಾಯ್ಕ, ಶಂಭು ಬೈಲಾರ, ಗ್ರಾಪಂ ಅಧ್ಯಕ್ಷೆ ಸುನಿತಾ ನಾಯ್ಕ ಇವರು ಮಾತನಾಡಿದರು. ತಾಪಂ ಸದಸ್ಯ ಭಾಷಾ ಪಟೇಲ್, ಗ್ರಾಪಂ ಉಪಾಧ್ಯಕ್ಷ ಆರ್.ಕೆ. ಪ್ರಭು, ಸದಸ್ಯೆ ವಿಜಯಾ ಗಜಾನನ ನಾಯ್ಕ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಸುರೇಶ್ ವಿ. ನಾಯ್ಕ ಅತಿಥಿಗಳಾಗಿ ಪಾಲ್ಗೊಂಡಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಆರ್.ಡಿ. ನಾಯ್ಕ ಸ್ವಾಗತಿಸಿದರು. ದುರ್ಗಾದೇವಿ ಯುವಕ ಸಂಘದ ಅಧ್ಯಕ್ಷ ಅಣ್ಣಪ್ಪ ಎಂ. ನಾಯ್ಕ ಕೃತಜ್ಞತೆ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com