ಹೊನ್ನಾವರ: ಕಸ್ತೂರಿ ಕನ್ನಡ ಎಚ್ಡಿ ಕುಮಾರಸ್ವಾಮಿ ಅಭಿಮಾನಿಗಳ ರಾಜ್ಯ ಸೇವಾ ಬಳಗದ ಉಕ ಜಿಲ್ಲಾ ಘಟಕದ ಮಹಿಳಾ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಮಂಜುಳಾ ರಾಮು ನಾಯ್ಕ ಅಂಕೋಲಾ ಇವರನ್ನು ರಾಜ್ಯಾಧ್ಯಕ್ಷ ಎ. ಕೆಂಪೇಗೌಡ ಇವರ ಆದೇಶದ ಮೇರೆಗೆ ಅಧ್ಯಕ್ಷ ಹುದ್ದೆಯಿಂದ ಮತ್ತು ಸಂಘಟನೆಯಿಂದ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಜಿ.ಕೆ. ಗೌಡ ತಲಗೋಡ ಇವರು ತಿಳಿಸಿದ್ದಾರೆ.
ಅವರು ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷರಾಗಿ ಈ ಹಿಂದೆ ನೇಮಕಗೊಂಡಿದ್ದರು. ಅವರು ಸಂಘಟನೆಯ ನಿಯಮಾವಳಿಗೆ ಮತ್ತು ಸಂಘಟನೆಗೆ ವಿರುದ್ಧವಾಗಿ ನಡೆದುಕೊಂಡು ಸಂಘಟನೆಯ ಪ್ರಗತಿಗೆ ಶ್ರಮಿಸದೆ ನಿಷ್ಕ್ರೀಯರಾಗಿರುವುದು ಸಂಘಟನೆಯ ರಾಜ್ಯ ಅಧ್ಯಕ್ಷರ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆ ಅವರು ಎಚ್ಡಿಕೆ ಅಭಿಮಾನಿ ಬಳಗದ ಸಂಘಟನೆ ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಸಂಘಟನೆಯ ಲೆಟರ್ಹೆಡ್ಗಳನ್ನು ಬಳಸುವಂತಿಲ್ಲ. ಒಂದು ವೇಳೆ ಬಳಸಿದಲ್ಲಿ ಕಾನೂನುಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿ.ಕೆ. ಗೌಡ ತಲಗೋಡ ಇವರು ಹೇಳಿಕೆ ನೀಡಿದ್ದಾರೆ.