ಅಪಾರ ದೇಣಿಗೆ

Updated on: 

ಹೂವಿನಹಡಗಲಿ: ಹಗರಿಬೊಮ್ಮನಹಳ್ಳಿಯಲ್ಲಿ ಆರಂಭವಾಗಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪೀಠಾರೋಹಣ ಬೃಹತ್ ಮಹೋತ್ಸವಕ್ಕೆ ಹೂವಿನಹಡಗಲಿ ತಾಲೂಕಿನಿಂದ 108 ಕ್ವಿಂಟಲ್. ಅಕ್ಕಿ, ರು. 1.8 ಲಕ್ಷ, 1.50 ಲಕ್ಷ ರೊಟ್ಟಿಯನ್ನು ದೇಣಿಗೆ ರೂಪದಲ್ಲಿ ನೀಡಲಾಗಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಕೆ. ವಿರೂಪಾಕ್ಷಗೌಡ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಲಕ್ಷ ರೊಟ್ಟಿ ಹೊತ್ತ ಮಿನಿ ಲಾರಿಯನ್ನು ಸಮಾವೇಶಕ್ಕೆ ಕಳುಹಿಸಲಾಗಿದೆ. ತಾಲೂಕಾದ್ಯಂತ ಸಮಾವೇಶಕ್ಕಾಗಿ ರೊಟ್ಟಿ, ನಗದು ಹಣ, ದವಸ ಧಾನ್ಯಗಳು ಸಾಕಷ್ಟು ಹರಿದು ಬಂದಿವೆ. ಸದ್ಯ ಲಕ್ಷ ರೊಟ್ಟಿಯನ್ನು ಹೊತ್ತ ಲಾರಿ, ಅಕ್ಕಿ ಲಾರಿ ಮಾತ್ರ ಕಳಿಸಲಾಗುತ್ತಿದೆ. ಇನ್ನೂ ತಾಲೂಕಿನಲ್ಲಿ ಹಂತ ಹಂತವಾಗಿ ಬರುವ ರೊಟ್ಟಿ ಇತರ ದವಸ ಧಾನ್ಯಗಳನ್ನೂ ಕಳಿಸಲಾಗುವುದು ಎಂದರು. ಬೇರೆ ಸಮಾಜದ ಮುಖಂಡರೂ ಧನ ಸಹಾಯದಿಂದ ಈ ಸಮಾವೇಶಕ್ಕೆ ಸಹಕರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಜಿಪಂ ಸದಸ್ಯ ಬಿ. ತೋಟನಾಯ್ಕ, ಜಗದೀಶಗೌಡ, ಪಾಟೀಲ ಬಸವನಗೌಡ, ಸೊಪ್ಪಿನ ರಾಕೇಶ, ವೀರೇಶ, ಹನಕನಹಳ್ಳಿ ಹಾಲೇಶ, ಅಕ್ಕಿ ಹಾಲೇಶ, ಶಂಕ್ರಪ್ಪ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com