ಯಲ್ಲಾಪುರ: ಹುಚ್ಚು ನಾಯಿ ಕಡಿತಕ್ಕೆ ಶಾಲಾ ಬಾಲಕನೋರ್ವ ಗಾಯಗೊಂಡಿರುವ ಘಟನೆ ಪಟ್ಟಣ ವ್ಯಾಪ್ತಿಯ ಬಾಳಗಿಮನೆ ಶಾಲಾ ಪ್ರದೇಶದಲ್ಲಿ ಸಂಭವಿಸಿದೆ. ಶ್ಲೋಕಾ ಶ್ರೀಕಾಂತ ಶಿರೋಡಕರ ಎಂಬ ಮೂರನೇ ತರಗತಿಯ ವಿದ್ಯಾರ್ಥಿ ಹುಚ್ಚು ನಾಯಿಯ ಕಡಿತಕ್ಕೆ ಗಾಯಗೊಂಡವನಾಗಿದ್ದು, ಶ್ಲೋಕಾನನ್ನು ಕಚ್ಚಿರುವ ನಾಯಿ ಗುರುವಾರ ಬೆಳಗ್ಗೆ ಇನ್ನಿತರ ನಾಯಿಗಳಿಗೂ ಕಚ್ಚಿ ಗಾಯಗೊಳಿಸಿದೆ ಎನ್ನಲಾಗಿದೆ.
ನಾಯಿ ಕಡಿತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ನಾಯಿಯನ್ನು ಕೊಂದು ಹಾಕಿದರು. ಬಾಳಗಿಮನೆ ಪ್ರದೇಶದಲ್ಲಿ ಮೂರಕ್ಕೂ ಹೆಚ್ಚು ನಾಯಿಗಳಿಗೆ ಹುಚ್ಚು ಹಿಡಿದ ಈ ನಾಯಿ ಕಚ್ಚಿ, ಗಾಯಗೊಳಿಸಿರುವುದಾಗಿ ತಿಳಿದುಬಂದಿದೆ.