ಕೈಗಾ: ಜಿಂಕೆ ಪ್ರತ್ಯಕ್ಷ

Updated on: 

ಕಾರವಾರ:  ಕೈಗಾ ಅಣು ವಿದ್ಯುತ್ ಯೋಜನೆಯ ವಸತಿ ಸಂಕೀರ್ಣದಲ್ಲಿ ಜಿಂಕೆಯೊಂದು ಈಚೆಗೆ ಪ್ರತ್ಯಕ್ಷವಾಗಿ, ವಸತಿ ಸಂಕೀರ್ಣದ ತುಂಬೆಲ್ಲ ಓಡಾಡಿತು.  ಕೈಗಾ ಒಂದನೇ ಘಟಕದ ಸಿ ವಿಭಾಗದ ವಸತಿ ಸಂಕೀರ್ಣದ ಬಳಿ ಜಿಂಕೆ ಓಡಾಡುತ್ತಿದ್ದಂತೆ ಕೈಗಾ ಅಣು ವಿದ್ಯುತ್ ಯೋಜನೆ ಅಧಿಕಾರಿ ಪುಟ್ಟರಾಜು ಕೆ. ಜಿಂಕೆಯ ಚಿತ್ರವನ್ನು ಸೆರೆ ಹಿಡಿದರು. ಕೈಗಾ ವಸತಿ ಸಂಕೀರ್ಣದಿಂದ ಸ್ವಲ್ಪ ದೂರದ ಕೈಗಾ ಬಾರೆ ಗೇಟ್ ಬಳಿ 7 ಜಿಂಕೆಗಳ ಹಿಂಡು ಇರುವುದನ್ನು ತಾವು ಕಂಡಿದ್ದಾಗಿ, ಇದರಲ್ಲಿ ಎರಡು ಮರಿಗಳೂ ಇವೆ ಎಂದು  ಪುಟ್ಟರಾಜು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಕೈಗಾ ಅಣು ವಿದ್ಯುತ್ ಯೋಜನಾ ಪ್ರದೇಶದ ಸಮೀಪದ ಕಾಡಿನಲ್ಲಿ ಹಲವು ಪ್ರಾಣಿಗಳು ವಾಸಿಸುತ್ತಿವೆ. ಈಗಾಗಲೆ 100ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳಿರುವುದನ್ನು ಗುರುತಿಸಲಾಗಿದೆ ಎಂದು ಪುಟ್ಟರಾಜು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com