ಕಾರವಾರ: ತಾಲೂಕಿನ ಮಾಜಾಳಿ ಸಮಿಪ ವಿಶೇಷ ಪೊಲೀಸ್ ಠಾಣೆ, ಅಬಕಾರಿ ಜಾರಿ, ಲಾಟರಿ ನಿಷೇಧ ದಳದ ಸಿಬ್ಬಂದಿ ಈಚೆಗೆ ದಾಳಿ ನಡೆಸಿ ಅಕ್ರಮ ಗೋವಾ ಮದ್ಯ ವಶಪಡಿಸಿಕೊಂಡಿದ್ದಾರೆ. ರು. 11,500 ಮೌಲ್ಯದ ಗೋವಾ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ ವೆಸ್ಪಾ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯ ಕಾಲಕ್ಕೆ ಆರೋಪಿ ಅರಣ್ಯ ಪ್ರದೇಶದಲ್ಲಿ ಓಡಿ ಪರಾರಿಯಾಗಿದ್ದಾನೆ. ಈತ ಗೋವಾದಿಂದ ಅಕ್ರಮ ಮದ್ಯ ತಂದು ಬೇರೆಡೆಗೆ ಸಾಗಿಸುತ್ತಿದ್ದ ಎಂದು ಅಬಕಾರಿ ಸಿಬ್ಬಂದಿ ತಿಳಿಸಿದ್ದಾರೆ.