ಹೊನ್ನಾವರ: ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಾರ್ಷಿಕೋತ್ಸವವನ್ನು ಹಿರಿಯ ಯಕ್ಷಗಾನ ಕಲಾವಿದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿಟ್ಟಾಣಿ, ಸನ್ಮಾನ, ಪ್ರಶಸ್ತಿ ಎಲ್ಲವೂ ಪ್ರಯತ್ನದ ಫಲ. ಮಕ್ಕಳಲ್ಲಿ ಪ್ರಯತ್ನಶೀಲ ಗುಣ ಜಾಗೃತಗೊಳ್ಳಬೇಕು ಎಂದರು.
ಭಾರತೀ ಎಜುಕೇಶನ್ ಟ್ರಸ್ಟ್ ವತಿಯಿಂದ ಚಿಟ್ಟಾಣಿ ಅವರನ್ನು ಸನ್ಮಾನಿಸಲಾಯಿತು. ಕೆನರಾ ಬ್ಯಾಂಕ್ ಹೊನ್ನಾವರ ಶಾಖೆಯ ಹಿರಿಯ ಅಧಿಕಾರಿ ಶೋಭಾ ಕುಲಕರ್ಣಿ ಮಾತನಾಡಿ, ಶಾಲೆಯ ಕಾರ್ಯವೈಖರಿ ಶಿಸ್ತುಬದ್ಧವಾಗಿದ್ದು, ಶಿಕ್ಷಕರು ಮಕ್ಕಳನ್ನು ಉತ್ತಮ ರೀತಿಯಲ್ಲಿ ತರಬೇತಿಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಗಣೇಶ್ ಹೆಗಡೆ 'ಸುಜ್ಞಾನ' ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಭಾರತೀ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಉಮೇಶ್ ಹೆಗಡೆ ಸ್ವಾಗತಿಸಿದರು. ಶಾಲಾ ಶೈಕ್ಷಣಿಕ ನಿರ್ದೇಶಕ ಜಿ.ಟಿ. ಹೆಬ್ಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶೈಲಾ ಹೆಗಡೆ ಶಾಲಾ ಶೈಕ್ಷಣಿಕ ಹಿನ್ನೋಟ ವಾಚಿಸಿದರು. ಭಾರತೀ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಆರ್.ಜಿ. ಹೆಗಡೆ ಗುಡ್ಗೆ, ಕೋಶಾಧ್ಯಕ್ಷ ಗಣೇಶ್ ಹೆಗಡೆ ವಡ್ಗೆರೆ, ಶ್ರೀರಾಘವೇಂದ್ರ ಸವೇದ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯ ವಿ.ಜಿ. ಹೆಗಡೆ ಗುಡ್ಗೆ ಇದ್ದರು.
ಶಿಕ್ಷಕಿ ಸಂಗೀತಾ ಮೇಸ್ತ ವಂದಿಸಿದರು. ಶಿಕ್ಷಕಿ ಅನಿತಾ ನಾಯ್ಕ ನಿರ್ವಹಿಸಿದರು.