ಮತದಾರರ ಸಂಖ್ಯೆ ಏರಿಕೆ

Updated on: 

ವಸಂತಕುಮಾರ್ ಕತಗಾಲ
ಕನ್ನಡಪ್ರಭ ವಾರ್ತೆ, ಕಾರವಾರ, ಜ. 22  
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳು ಚುನಾವಣಾ ತಾಲೀಮು ಆರಂಭಿಸಿದೆ. ಈ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮತದಾರರ ಸಂಖ್ಯೆ 10,21,905ಕ್ಕೇರಿದೆ.
ಹಳಿಯಾಳ ವಿಧಾನಸಭೆ ಕ್ಷೇತ್ರ: ಈ ಕ್ಷೇತ್ರ ಹಳಿಯಾಳ ಹಾಗೂ ಜೋಯಿಡಾ ತಾಲೂಕುಗಳನ್ನು ಒಳಗೊಂಡಿದೆ. ಕ್ಷೇತ್ರದ ಒಟ್ಟೂ ಮತದಾರರ ಸಂಖ್ಯೆ 1,53,450 ಆಗಿದೆ. ಇದರಲ್ಲಿ ಜೋಯಿಡಾ ತಾಲೂಕಿನ ಮತದಾರರು 37,938 ಆದರೆ ಹಳಿಯಾಳ ತಾಲೂಕಿನ ಮತದಾರರು 1,15,512 ಆಗಿದ್ದಾರೆ.
ಕಾರವಾರ- ಅಂಕೋಲಾ ವಿಧಾನಸಭೆ ಕ್ಷೇತ್ರ: ಈ ಕ್ಷೇತ್ರ ಕಾರವಾರ ಹಾಗೂ ಅಂಕೋಲಾ ತಾಲೂಕುಗಳನ್ನು ಒಳಗೊಂಡಿದೆ. ಕ್ಷೇತ್ರದಲ್ಲಿ ಒಟ್ಟೂ ಮತದಾರರ ಸಂಖ್ಯೆ 1,99,953 ಆಗಿದೆ. ಇದರಲ್ಲಿ ಕಾರವಾರ ತಾಲೂಕಿನಲ್ಲಿ 1,16,470 ಮತದಾರರಿದ್ದರೆ, ಅಂಕೋಲಾ ತಾಲೂಕಿನಲ್ಲಿ 83,483 ಮತದಾರರಿದ್ದಾರೆ.
ಕುಮಟಾ-ಹೊನ್ನಾವರ ವಿಧಾನಸಭೆ ಕ್ಷೇತ್ರ: ಈ ಕ್ಷೇತ್ರದಲ್ಲಿ ಸಂಪೂರ್ಣ ಕುಮಟಾ ತಾಲೂಕು ಹಾಗೂ ಹೊನ್ನಾವರ ತಾಲೂಕಿನ ಭಾಗಶಃ ಪ್ರದೇಶ ಒಳಗೊಂಡಿದೆ. ಕ್ಷೇತ್ರದ ಒಟ್ಟೂ ಮತದಾರರ ಸಂಖ್ಯೆ 1,64,585 ಕ್ಕೇರಿದೆ. ಇದರಲ್ಲಿ ಕುಮಟಾ ತಾಲೂಕಿನ 1,15,665 ಮತದಾರರಿದ್ದರೆ, ಹೊನ್ನಾವರ (ಭಾಗಶಃ) ತಾಲೂಕಿನ 48,920 ಮತದಾರರಿದ್ದಾರೆ.
ಭಟ್ಕಳ ವಿಧಾನಸಭೆ ಕ್ಷೇತ್ರ: ಈ ಕ್ಷೇತ್ರದಲ್ಲಿ ಭಟ್ಕಳ ಹಾಗೂ ಹೊನ್ನಾವರ ತಾಲೂಕಿನ ಭಾಗಶಃ ಪ್ರದೇಶ ಒಳಗೊಂಡಿದೆ. ಕ್ಷೇತ್ರದಲ್ಲಿ ಒಟ್ಟೂ ಮತದಾರರ ಸಂಖ್ಯೆ 1,84,511ಕ್ಕೇರಿದೆ. ಭಟ್ಕಳ ತಾಲೂಕಿನಲ್ಲಿ 1,07,531 ಮತದಾರರಿದ್ದರೆ, ಹೊನ್ನಾವರ (ಭಾಗಶಃ ) ತಾಲೂಕಿನ 76,980 ಮತದಾರರು ಇದ್ದಾರೆ.
ಶಿರಸಿ ವಿಧಾನಸಭಾ ಕ್ಷೇತ್ರ:  ಈ ಕ್ಷೇತ್ರ ಶಿರಸಿ ತಾಲೂಕಿನ ಭಾಗಶಃ ಪ್ರದೇಶ ಹಾಗೂ ಸಿದ್ದಾಪುರ ತಾಲೂಕನ್ನು ಒಳಗೊಂಡಿದೆ. ಕ್ಷೇತ್ರದಲ್ಲಿ ಒಟ್ಟೂ ಮತದಾರರ ಸಂಖ್ಯೆ 1,70,312 ಆಗಿದೆ. ಶಿರಸಿ ತಾಲೂಕಿನ (ಭಾಗಶಃ) ಮತದಾರರ ಸಂಖ್ಯೆ 95,471 ಆಗಿದ್ದರೆ, ಸಿದ್ದಾಪುರ ತಾಲೂಕಿನ 74,841 ಮತದಾರರಿದ್ದಾರೆ.
ಯಲ್ಲಾಪುರ ವಿಧಾನಸಭೆ ಕ್ಷೇತ್ರ: ಈ ಕ್ಷೇತ್ರದಲ್ಲಿ ಯಲ್ಲಾಪುರ-ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಭಾಗಶಃ ಪ್ರದೇಶ ಒಳಗೊಳ್ಳಲಿದೆ. ಈ ಕ್ಷೇತ್ರದಲ್ಲಿ ಒಟ್ಟೂ ಮತದಾರರ ಸಂಖ್ಯೆ 1,49,094 ರಷ್ಟಾಗಿದೆ. ಇದರಲ್ಲಿ ಮುಂಡಗೋಡ ತಾಲೂಕಿನ ಮತದಾರರ ಸಂಖ್ಯೆ 58,791 ರಷ್ಟಾದರೆ, ಯಲ್ಲಾಪುರ ತಾಲೂಕಿನ ಮತದಾರರ ಸಂಖ್ಯೆ 56,587 ಆಗಿದೆ ಹಾಗೂ ಶಿರಸಿ ತಾಲೂಕಿನ ಭಾಗಶಃ ಮತದಾರರ ಸಂಖ್ಯೆ 33,716ರಷ್ಟಿದೆ.
ರಾಷ್ಟ್ರೀಯ ಮತದಾರರ ದಿನ: ಜ. 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ನಡೆಸಲಾಗುತ್ತಿದೆ. ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಆದರೆ ಮತದಾರರ ಅಂತಿಮ ಪಟ್ಟಿ ಸಿದ್ಧಗೊಂಡಿದ್ದರೂ ಇನ್ನೂ ಮತದಾರರ ಹೆಸರುಗಳು ಸೇರ್ಪಡೆಯಾಗುತ್ತಲೇ ಇದೆ. ಹಾಗಾಗಿ ಪರಿಷ್ಕೃತ ಪಟ್ಟಿ ಸಿದ್ಧಗೊಳ್ಳಲು ಇನ್ನೂ ಸಮಯ ಬೇಕಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com