ಶಿರಸಿ: ಜ. 5 ಹಾಗೂ ಜ. 6ರಂದು ಕೋಲಾರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 34ನೇ ರಾಜ್ಯಮಟ್ಟದ ಮಾಸ್ಟರ್ ಹಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 35 ವರ್ಷದ ಮೇಲಿನ ಹಾಗೂ 85 ವರ್ಷದೊಳಗಿನ ಸಾವಿರಾರು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಈ ಕ್ರೀಡಾಕೂಟದಲ್ಲಿ ಶಿರಸಿ ನಿವೃತ್ತ ಇಸಿಒ ಪ್ರಭಾಕರ ಎನ್. ಜೋಗಳೇಕರ್ (65 ವರ್ಷ) 100 ಮೀಟರ್ ಹಾಗೂ 200 ಮೀಟರ್ ಓಟದಲ್ಲಿ ಪ್ರಥಮ, ಉದ್ದಜಿಗಿತದಲ್ಲಿ ಪ್ರಥಮ ಪದಕಗಳನ್ನು ಪಡೆಯುವ ಮೂಲಕ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್ನಾಗಿ ಹೊರ ಹೊಮ್ಮಿದ್ದಾರೆ. ಸಿದ್ದಾಪುರದ ದೈಹಿಕ ಶಿಕ್ಷಕ ಸುಧಾಮ ಆರ್. ಪೈ (45 ವರ್ಷ) 100 ಮೀಟರ್ ಹಾಗೂ 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಲಕ್ಷ್ಮಣ ಪಟಗಾರ್ (40 ವರ್ಷ) 1500 ಮೀಟರ್ ಓಟದಲ್ಲಿ ಪ್ರಥಮ, 800 ಮೀಟರ್ ಹಾಗೂ 5000 ಮೀಟರ್ ಓಟಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಶಿರಸಿ ನಿವೃತ್ತ ಎಪಿಎಂಸಿ ಅಧಿಕಾರಿ ಮೋಹನ ಬಿ. ನೇತ್ರೇಕರ್ (60 ವರ್ಷ) 5000 ಮೀಟರ್, 1500 ಮೀಟರ್, 800 ಮೀಟರ್ ಓಟಗಳಲ್ಲಿ ತೃತೀಯ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಯಲ್ಲಾಪುರದ ನಾಗರಾಜ ಕೆ. ನಾಯ್ಕ (40 ವರ್ಷ) 1500 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈ ಎಲ್ಲ ಕ್ರೀಡಾಪಟುಗಳನ್ನು ಉತ್ತರ ಕನ್ನಡ ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಹಾರ್ದಿಕವಾಗಿ ಅಭಿನಂದಿಸಿದೆ.