ಮುನಿರಾಬಾದ್: ಜಿಲ್ಲಾ ಸಾಹಿತ್ಯ ಹಾಗೂ ಪರಿಸರ ಹಿತರಕ್ಷಣೆ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಟ್ಟಡವನ್ನು ಪಶು ವೈದ್ಯಾಧಿಕಾರಿ ಡಾ.ಅಶ್ವತ್ ಕುಮಾರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿ ಕನ್ನಡಪರ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದರು.
ಕಸಾಪ ಹೋಬಳಿ ಘಟಕದ ಅಧ್ಯಕ್ಷ ರಾಮಮೂರ್ತಿ, ಸಾಹಿತ್ಯ ಪರಿಸರ ಹಿತರಕ್ಷಣೆ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್. ವೆಂಕಟೇಶ, ಗೌರವಾಧ್ಯಕ್ಷ ಭರಮಪ್ಪ ಬೆಲ್ಲದ್, ಗ್ರಾಪಂ ಅಧ್ಯಕ್ಷೆ ರಾಧಿಕಾ ರವಿ, ಮಾಜಿ ಅಧ್ಯಕ್ಷ ಬಾಲಚಂದ್ರ, ತೋಟಗಾರಿಕೆ ಇಲಾಖೆ ಹಿರಿಯ ಉಪನಿರ್ದೇಶಕ ಶ್ರೀಧರ್, ಊರಿನ ಹಿರಿಯರಾದ ಶಂಕ್ರಪ್ಪ ದೊಡ್ಮನಿ, ಶಿಕ್ಷಕ ಉಮೇಶ ಸುರ್ವೆ ಉಪಸ್ಥಿತರಿದ್ದರು.