ಸಂಘಟಿತ ಶಕ್ತಿಯಿಂದ ಅಭಿವೃದ್ಧಿ

Updated on: 




ಮುಂಡಗೋಡ:  ಸಂಘಟಿತ ಶಕ್ತಿ ಬಲವಾಗಿದ್ದಾಗ ಮಾತ್ರ ಅಭಿವೃದ್ಧಿ  ಯೋಜನೆಗಳು ಮನೆ ಬಾಗಿಲಿಗೆ ತಲುಪುತ್ತವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು ಎಂದು ಕರ್ನಾಟಕ ಉತ್ತರ ಪ್ರಾಂತ ಧರ್ಮ ಜಾಗೃತಿ ಸಂಯೋಜಕ ಗ.ರಾ. ಸುರೇಶ ಹೇಳಿದರು.
ಇಲ್ಲಿಯ ಸಾಯಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಹಾಗೂ ದೇಶದ್ರೋಹಿಗಳ ಒಡೆದಾಳುವ ಕುತಂತ್ರ ಹಾಗೂ ದೇಶದ ಸಂವಿಧಾನ ಆಡಳಿತ ವ್ಯವಸ್ಥೆಯಿಂದ ಆದಿವಾಸಿಗಳ ಸ್ಥಿತಿ ಇಂದಿಗೂ ದುಸ್ಥರವಾಗಿದೆ. ಜಾತಿ ಧರ್ಮದಲ್ಲಿ ಒಡಕು ಹುಟ್ಟಿಸಲಾಗಿದ್ದು, ಅಭಿವೃದ್ಧಿಗೆ ಮಾರಕವಾಗುತ್ತಿದೆ. ದೇಶದಲ್ಲಿ ಸಂಘಟಿತ ಸಮಾಜ ನಿರ್ಮಾಣವಾಗಬೇಕಿದ್ದು, ದೇಶದ್ರೋಹ ಚಟುವಟಿಕೆಗಳ ನಿಯಂತ್ರಿಸುವ ಬಗ್ಗೆ ಅರಿವು ಮೂಡಬೇಕಿದೆ. ದೇಶ ರಕ್ಷಣೆ ಹೋರಾಟದಲ್ಲಿ ಮರಾಠಾ ಹಾಗೂ ಬಂಜಾರ ಹಾಗೂ ವನವಾಸಿ ಜನಾಂಗದ ಶಕ್ತಿ ಪ್ರಮುಖವಾಗಿದೆ. ವನವಾಸಿಗರನ್ನು ಕಾಡು ಜನಾಂಗವೆಂದು ಬಿಂಬಿಸಿದರೂ ಸಹ ಅವರು ಮೂಲ ಪರಂಪರೆ ಬಿಟ್ಟಿಲ್ಲ. ಸಮಾಜದ ಅಭಿವೃದ್ಧಿಯೊಂದಿಗೆ ಬುಡಕಟ್ಟು ಜನಾಂಗವನ್ನು ಕೊಂಡೊಯ್ಯುವುದೇ ಈ ಧರ್ಮ ಜಾಗೃತಿ ಸಮಾವೇಶದ ಉದ್ದೇಶವಾಗಿದೆ ಎಂದರು. ವನವಾಸಿ ಕಲ್ಯಾಣ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ, ವನವಾಸಿ ಕಲ್ಯಾಣ ರಾಜ್ಯ ವಿದ್ಯಾರ್ಥಿ ನಿಲಯಗಳ ಮುಖ್ಯಸ್ಥ ಶಾಂತಾರಾಮ ಸಿದ್ದಿ, ಅಶೋಕ ಗೋಕರ್ಣ, ರಾಮು ಲಮಾಣಿ, ದೊಂಡು ಪಾಟೀಲ ಮುಂತಾದವರು ಇದ್ದರು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com