ಹೊನ್ನಾವರ: ಕೃಷಿ ಕಾರ್ಯಕ್ಕೆ ಅನುಕೂಲವಾಗುವಂತೆ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ಹೊನ್ನಾವರ ತಾಲೂಕು ಘಟಕ ಹಾಗೂ ರೈತ ಮೋರ್ಚಾದಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಜಿ. ನಾಯ್ಕ, ಹೊನ್ನಾವರ ತಾಲೂಕಾಧ್ಯಕ್ಷ ವಿನೋದ ನಾಯ್ಕ ರಾಯಲಕೇರಿ, ಮಾಜಿ ಸಚಿವ ಶಿವಾನಂದ ನಾಯ್ಕ, ರೈತ ಮೋರ್ಚಾದ ಅಧ್ಯಕ್ಷ ಶಂಕರ ಭಟ್, ಉಪಾಧ್ಯಕ್ಷ ಸುಬ್ರಾಯ ಹೆಗಡೆ, ಉಮೇಶ ನಾಯ್ಕ, ಸುರೇಶ ಖಾರ್ವಿ, ಬಾಲಚಂದ್ರ ಹೆಗಡೆ, ಸುರೇಶ ಶೇಟ್, ಶಿವರಾಜ ಮೇಸ್ತ, ಎಂ.ಎಸ್. ಹೆಗಡೆ, ನಾರಾಯಣ ನಾಯ್ಕ, ಗಂಗಾಧರ ನಾಯ್ಕ, ಸುಬ್ರಾಯ ನಾಯ್ಕ, ಪರಮೇಶ್ವರ ಮೇಸ್ತ, ಶ್ರೀಧರ ನಾಯ್ಕ, ಶಂಕರ ನಾಯ್ಕ, ಎಂ.ಆರ್. ಹೆಗಡೆ, ಸಾಧನಾ ನಾಯ್ಕ, ಗೀತಾ ಹೆಗಡೆ, ಗಣೇಶ ಹೆಗಡೆ, ಮಂಜು ಪಾವಿಕುರ್ವಾ, ಡಿ.ಎನ್. ನಾಯ್ಕ, ಗಣಪತಿ ನಾಯ್ಕ ಪಕ್ಷದ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಶಕ್ತಿ ಕೇಂದ್ರದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮೋರ್ಚಾದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿದ್ಯುತ್ ಅವ್ಯವಸ್ಥೆ: ಪ್ರತಿಭಟನೆ
ಕುಮಟಾ: ಅಸಮರ್ಪಕ ವಿದ್ಯುತ್ ಸರಬರಾಜು, ಅನಿಯಮಿತ ಲೋಡ್ ಶೆಡ್ಡಿಂಗ್ ಇತ್ಯಾದಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಹೆಸ್ಕಾಂ ಕಚೇರಿ ತನಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಚಿಕ್ಕ, ಅತೀಚಿಕ್ಕ ಹಿಡುವಳಿದಾರ ರೈತರೆ ಹೆಚ್ಚಾಗಿದ್ದು, ಅವರೆಲ್ಲ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಸರ್ಕಾರದ ರೈತ ವಿರೋಧಿ ನೀತಿ ಅಭಿವೃದ್ಧಿಗೆ ಮಾರಕವಾಗಿದೆ. ಮಾತ್ರವಲ್ಲ ಬೆಳೆ ನಷ್ಟದೊಂದಿಗೆ ರೈತರನ್ನು ದಿವಾಳಿ ಅಂಚಿಗೆ ಒಯ್ಯುತ್ತಿದೆ. ಇಲ್ಲಿ ಹರಿಯುವ ನೀರಿನ ಮೂಲಗಳು ಇಲ್ಲದೇ ಇರುವದರಿಂದ ವಿದ್ಯುತ್ ಪಂಪ್ಸೆಟ್ಗಳನ್ನು ನಂಬಿ ಬೆಳೆ ಬೆಳೆದು ಬದುಕಬೇಕಾಗಿದೆ. ಆದರೆ, ಲೋಡ್ ಶೆಡ್ಡಿಂಗ್ನಿಂದ ಫಸಲುಗಳು ಕೈಗೆ ಬಾರದ ಪರಿಸ್ಥಿತಿಯಿದೆ ಎಂದು ಪ್ರತಿಭಟನೆ ನಡೆಸಿ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಿದರು. ಈ ಸಂದರ್ಭದಲ್ಲಿ ರೈತ ಮೋರ್ಚಾದ ಅಧ್ಯಕ್ಷ ಶ್ರೀಧರ ಭಟ್ಟ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ಪ್ರಮುಖರಾದ ವಿನೋದ ಪ್ರಭು, ಮದನ ನಾಯಕ, ಸಂದೇಶ ಶೇಟ್, ರಾಜೇಶ ಪ್ರಭು, ಜಿ.ಐ. ಹೆಗಡೆ, ಪ್ರಶಾಂತ ನಾಯ್ಕ, ಹೇಮಂತ ಗಾಂವಕರ, ಜಗದೀಶ ಬಲಾಳ, ಸೂರಜ ನಾಯ್ಕ, ಉಮೇಶ ಆಚಾರ್ಯ, ಗಾಯತ್ರಿ ಗೌಡ, ಲಿಂಗಪ್ಪ ನಾಯ್ಕ, ರಾಧಾಕೃಷ್ಣ ಗೌಡ ಮತ್ತಿತರರು ಇದ್ದರು.
Advertisement