ಕಾರವಾರ: ನ್ಯಾಯಬೆಲೆ ಅಂಗಡಿಯಲ್ಲಿ ದಿನಸಿ ಪಡೆಯಲು ಹಾಗೂ ಅಡುಗೆ ಅನಿಲವನ್ನು ಮುಂಗಡವಾಗಿ ಕಾಯ್ದಿರಿಸಲು ಮೊಬೈಲ್ ಸಂದೇಶವನ್ನು ಕಳಿಸುವ ವಿಧಾನವನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಎಂ.ಟಿ. ರೇಜು ಅವರಿಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಸದಸ್ಯರು ಸೋಮವಾರ ಮನವಿ ನೀಡಿದರು.
ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ, ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿ ಬಳಕೆದಾರರು ದಿನಸಿ ಪಡೆಯಲು ಹಾಗೂ ಸಿಲೆಂಡರ್ ಬಳಕೆ ಮಾಡುವ ಮೊಬೈಲ್ ಸಂದೇಶದ ಮುಂಗಡವಾಗಿ ಕಾಯ್ದಿರಿಸುವ ಯೋಜನೆ ರೂಪಿಸಲಾಗಿದೆ. ಇದರಿಂದ ಬಡವರಿಗೆ ಮತ್ತು ತಿಳಿವಳಿಕೆ ಇಲ್ಲದವರಿಗೆ ತೊಂದರೆಯಾಗುತ್ತಿದೆ. ನಗರದಲ್ಲಿ ಸಾಕಷ್ಟು ಜನರ ಬಳಿ ಮೊಬೈಲ್ ಇಲ್ಲ. ಅಲ್ಲದೇ ಅನಕ್ಷರರು ಬಹಳ ಸಂಖ್ಯೆಯಲ್ಲಿದ್ದಾರೆ.
ಕೆಲ ತಿಂಗಳಿನಿಂದ ಹಲವರು ಪಡಿತರ ಮತ್ತು ಗ್ಯಾಸ್ ಪಡೆಯದೇ ವಂಚಿತರಾಗಿದ್ದಾರೆ. ಹೀಗಾಗಿ ಈ ಹಿಂದಿನಂತೆ ಆಯಾ ಕಾರ್ಯಾಲಯದಲ್ಲಿ ಹಾಗೂ ತಹಸೀಲ್ದಾರ್ ಕಚೇರಿಯಲ್ಲಿ ಪಡಿತರ ಚೀಟಿ ನೊಂದಾಯಿಸಿಕೊಳ್ಳುವ ವಿಧಾನವನ್ನು ಅನುಸರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಯಲ್ಲಪ್ಪಾ ವಡ್ಡರ್, ಬಸವರಾಜ ವಾಲ್ಮೀಕಿ, ರಾಜಾ ಕೆ. ವಡ್ಡರ್ ಪವಿತ್ರಾ ಮೇತ್ರಿ ಇದ್ದರು.
Advertisement