ಯಲ್ಲಾಪುರ: ಆಧುನಿಕ ಜೀವನಾಕರ್ಷಣೆಗೆ ಬಲಿಯಾಗುತ್ತಿರುವ ಯುವ ಜನಾಂಗದ ಮನಸ್ಸುಗಳು ವಾಣಿಜ್ಯೀಕರಣಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ನೀಡಲಾರಂಭಿಸಿದ್ದು, ಸಾಮಾಜಿಕ ಶಾಂತಿ, ಸಮಾಧಾನ, ತಾಳ್ಮೆಗಳು ಕಣ್ಮರೆಯಾಗುವ ದುರಂತ ಸಂಭವಿಸಿದೆ ಎಂದು ನಿವೃತ್ತ ಅಧ್ಯಾಪಕ, ಚಿಂತನಶೀಲ ಸಾಹಿತಿ ಕಾಳೇಗೌಡ ನಾಗವಾರ ಹೇಳಿದರು. ಸೋಮವಾರ ಬೆಳಗ್ಗೆ ಪಟ್ಟಣದ ವೈಟಿಎಸ್ಎಸ್ ಪಪೂ ಕಾಲೇಜಿನಲ್ಲಿ ರಚನೆಗೊಂಡ ವಿದ್ಯಾರ್ಥಿ ಸಂಸತ್ತು ಹಾಗೂ ಎನ್ಎಸ್ಎಸ್ ಕಾರ್ಯಚಟುವಟಿಕೆ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವೈಟಿಎಸ್ಎಸ್ ಅಧ್ಯಕ್ಷ ಗಜಾನನ ಭಟ್ಟ, ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಮಾತನಾಡಿದರು. ಎನ್ಎಸ್ಎಸ್ ಸಂಯೋಜನಾಧಿಕಾರಿ ಮನೋಹರ ಶಾನಭಾಗ ವೇದಿಕೆಯಲ್ಲಿದ್ದರು. ಸಹನಾ ಭಟ್ಟ, ಸೌಮ್ಯಾ ಕೋಟೆಮನೆ, ಪ್ರಜ್ಞಾ ಹೆಗಡೆ, ಕೀರ್ತಿ ಭಟ್ಟ ಪ್ರಾರ್ಥಿಸಿದರು. ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಸ್ವಾಗತಿಸಿದರು. ಎನ್ಎಸ್ಎಸ್ ಘಟಕವನ್ನು ಶಿಕ್ಷಕ ಎನ್.ಎಸ್. ಭಟ್ಟ ವಿದ್ಯಾರ್ಥಿ ಸಂಸತ್ತನ್ನು ಉಪನ್ಯಾಸಕ ಜೆ.ಎನ್. ಗುನಗಾ ಪರಿಚಯಿಸಿದರು. ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ಶಕುಂತಲಾ ಸಿಂದೊಳ್ಳಿ ಹಾಗೂ ಗಂಗಾ ನಾಯಕ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕ ವಿನೋದ ಭಟ್ಟ ನಿರೂಪಿಸಿದರು. ಉಪಪ್ರಾಂಶುಪಾಲರಾದ ಲಕ್ಷ್ಮೀ ಗಾಂವ್ಕರ್ ವಂದಿಸಿದರು.
Advertisement