ಉ.ಕ. ಅಭಿವೃದ್ಧಿಗೆ ರೈಲ್ವೆ ಮಾರ್ಗ ರಹದಾರಿ

Updated on

ಹೂವಿನಹಡಗಲಿ: ಗದಗ-ಹರಪನಹಳ್ಳಿ ರೈಲ್ವೆ ನೂತನ ಮಾರ್ಗವು ಕೇವಲ ಎರಡು ತಾಲೂಕು ಅಭಿವೃದ್ಧಿ ಮಾತ್ರ ಅಡಗಿಲ್ಲ. ಉತ್ತರ ಕರ್ನಾಟಕ ಭಾಗದ ರಹದಾರಿಯಾಗಲಿದೆ. ಶೀಘ್ರದಲ್ಲಿ ರಾಜ್ಯ, ಕೇಂದ್ರ ಸರ್ಕಾರ ಇಚ್ಛಾಶಕ್ತಿಯಿಂದ ಕೆಲಸ ಮಾಡಿಬೇಕೆಂದು ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಗದಗ-ಹರಪನಹಳ್ಳಿ ರೈಲ್ವೆ ಜಂಟಿ ಹೋರಾಟ ಸಮಿತಿ ರಚನೆ ಸಭೆಯಲ್ಲಿ ಅವರು ಮಾತನಾಡಿದರು.
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಮಾಡಲು ಅರಣ್ಯ ಪ್ರದೇಶ ಇದೆ ಎಂದು ಹೇಳುವ ರಾಜಕಾರಣಿಗಳು ಅಧಿಕಾರಿಗಳಿಗೆ ಮಂಗಳೂರು, ಬೆಂಗಳೂರು ಮಾರ್ಗದಲ್ಲಿ ಅರಣ್ಯ ಪ್ರದೇಶದಲ್ಲೇ ರೈಲ್ವೆ ಮಾರ್ಗ ಮಾಡಿರುವ ಉದಾಹರಣೆ ಕಣ್ಮುಂದೆ ಇದೆ. ಆದರೆ, ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳ ಉಚ್ಛಾಶಕ್ತಿ ಕೊರತೆಯಿಂದ ರೈಲ್ವೆ ಯೋಜನೆಗಳು ನೆನೆಗುದಿಗೆ ಬೀಳುತ್ತಿವೆ. ಆದ್ದರಿಂದ ಹೋರಾಟಗಾರರಿಗೆ ಹೋರಾಟ ಅನಿವಾರ್ಯತೆ ಎದುರಾಗಿದೆ ಎಂದರು.
ಮುಂಡರಗಿ, ಹೂವಿನಹಡಗಲಿ ತಾಲೂಕುಗಳು ಸಾರಿಗೆ ಮಾರ್ಗ ವಿಚಾರದಲ್ಲಿ ಸಾಕಷ್ಟು ಹಿಂದುಳಿದ ಪ್ರದೇಶವಾಗಿದ್ದು, ಸಾಕಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಎರಡು ತಾಲೂಕುಗಳ ಸರ್ವಾಂಗೀಣ ಅಭಿವೃದ್ಧಿ ಜತೆಗೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಯೋಜನೆ ಪೂರಕವಾಗಲಿದೆ. ಇದನ್ನು ಮೊದಲು ರಾಜಕಾರಣಿಗಳು ಮನವರಿಕೆ ಮಾಡಿಕೊಳ್ಳಬೇಕೆಂದರು.
ರೈಲ್ವೆ ಹೋರಾಟ ಸಮಿತಿ ಸಂಚಾಲಕ ಎಸ್.ಎಸ್. ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ರೈಲ್ವೆ ಮಾರ್ಗಕ್ಕೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆ, ಸರ್ವೇ ಕಾರ್ಯಕ್ಕೆ ಅನುದಾನ ಬಿಡುಗಡೆ ಸೇರಿದಂತೆ ಎಲ್ಲ ರೀತಿ ಸಾಧಕ  ಬಾಧಕಗಳ ಕುರಿತು ನಿರಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧಪಟ್ಟ ಸಚಿವರಿಗೆ ಪತ್ರ ವ್ಯವಹಾರ ಮಾಡಿ, ಹೋರಾಟ ಹಾಗೂ ಯೋಜನೆ ಜೀವಂತವಾಗಿಡಬೇಕೆಂದು ಹೇಳಿದರು.
ರೈಲ್ವೆ ಜಂಟಿ ಕ್ರಿಯಾ ಸಮಿತಿ ರಚನೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೊಟ್ರಗೌಡ ಸಿದ್ದನಗೌಡ ಪಾಟೀಲ್ ಅಧ್ಯಕ್ಷತೆ, ವೈ.ಎನ್. ಗೌಡರ್ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಗದಗ-ಹರಪನಹಳ್ಳಿ ರೈಲ್ವೆ ಕ್ರಿಯಾ ಸಮಿತಿ ರಚನಾ ಸಭೆ ಜರುಗಿತು. ಗೌರವಾಧ್ಯಕ್ಷರಾಗಿ ಎಸ್.ಎಸ್. ಪಾಟೀಲ್, ಕಾರ್ಯಾಧ್ಯಕ್ಷ ಬಸವರಾಜ ನವಲಗುಂದ, ಉಪಾಧ್ಯಕ್ಷರಾಗಿ ಕೆ.ಅಯ್ಯನಗೌಡ,  ವೈ.ಎಚ್. ಭಜಂತ್ರಿ, ಕೊಟ್ರಗೌಡ ಸಿದ್ದನಗೌಡ ಪಾಟೀಲ್, ಪುಂಡಿಕಾಳ ವೀರಣ್ಣ, ಎಸ್.ಎಂ.ಬಸವರಾಜ, ಪ್ರಧಾನ ಕಾರ್ಯದರ್ಶಿಗಳಾಗಿ ಅಂದಾನಗೌಡ ದೊಡ್ಡನಗೌಡ್ರ ಕುಲಕರ್ಣಿ, ಎಸ್. ಲಿಂಗರಾಜ, ಬಸವರಾಜ ಹೂಗಾರ, ಖಜಾಂಚಿಗಳಾಗಿ ಮೋಹನ್ ಗೌಡ ಪಾಟೀಲ್, ಎಸ್.ಎಂ. ಜಾನ್, ಕಾನೂನು ಸಲಹೆಗಾರರಾಗಿ ಚಂದ್ರಕಾಂತ್ ಮಟ್ಟಿ, ಸಿ.ಕೆ.ಎಂ. ಬಸವಲಿಂಗ ಸ್ವಾಮಿ, ತಾಂತ್ರಿಕ ಸಲಹೆಗಾರರಾಗಿ ಡಿ.ಜಿ. ಹಿರೇಮಠ, ಕೆ.ಎಂ. ವಿಶ್ವರಾಧ್ಯ ಸೇರಿದಂತೆ 21 ಮಂದಿ ಸದಸ್ಯರ ಕಾರ್ಯಕಾರಿ ಸಮಿತಿ ರಚನೆ ಮಾಡಲಾಗಿದೆ. ಈ ಸಂದರ್ಭ ಡಾ. ಕೆ. ಮಲ್ಲಿಕಾರ್ಜುನಗೌಡ, ವರ್ತಕ ಸಂಘದ ರವಿಕುಮಾರ, ಎ. ಕೊಟ್ರಗೌಡ ಇತರರಿದ್ದರು. ಎಸ್. ನಿಂಗರಾಜ ನಿರೂಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com