ಕಲ್ಯಾಣ ಯೋಜನೆ ಅದಾಲತ್ ಯಶಸ್ವಿ

Updated on: 

ಶಿರಸಿ: ಕಾನೂನು ಉತ್ಸವದ ಅಂಗವಾಗಿ ಜರುಗಿದ ಸರ್ಕಾರದ ಕಲ್ಯಾಣ ಯೋಜನೆಗಳ ಅದಾಲತ್ ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳನ್ನು ಗುರುತಿಸುವಿಕೆ, ಫಲಾನುಭವಿಗಳ ಆದೇಶಪತ್ರ ಹಂಚುವಿಕೆ ಹಾಗೂ ವಿವಿಧ ಯೋಜನೆಗಳ ಅಪೇಕ್ಷಿತ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸುವುದರೊಂದಿಗೆ ಯಶಸ್ವಿಗೊಂಡಿತು.
ತಹಸೀಲ್ದಾರ್ ಕಚೇರಿಯಿಂದ ವಿವಿಧ ಯೋಜನೆಗಳ 23 ಫಲಾನುಭವಿಗಳು, ನಗರಸಭೆ ಜನನ ದಾಖಲೆಗೆ ಸಂಬಂಧಿಸಿ 47, ಸಾರಿಗೆ ಇಲಾಖೆಯಿಂದ 6 ಚಾಲನ ಪರವಾನಗಿ ಪತ್ರಗಳು ಪ್ರಕರಣಗಳು ರಾಜಿಯಲ್ಲಿ ಪೂರ್ಣಗೊಂಡಿರುವುದು ಅದಾಲತ್‌ನ ವಿಶೇಷವಾಗಿದೆ.
ಭಾರತ ಸಂಚಾರ ನಿಗಮ ನಿಯಮಿತ ಗ್ರಾಹಕರ ಮೇಲೆ ದಾಖಲಿಸಿದ ವ್ಯಾಜ್ಯ ಪೂರ್ವ ಪ್ರಕರಣದಲ್ಲಿ ಗ್ರಾಹಕರಿಂದ 25 ಪ್ರಕರಣದಿಂದ ರು. 75,000 ರಾಜಿ ಮೂಲಕ ಸಂದಾಯ ವಾದವು.
ಅದಾಲತ್‌ನಲ್ಲಿ ತ್ವರಿತಗತಿ ನ್ಯಾಯಾಲಯದ ಪೀಠಾಸೀನಾಧಿಕಾರಿ ಸಿ.ಎನ್. ಸುಣಗಾರ, ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀಪಾದ. ಎನ್. ಪ್ರಧಾನ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಮನಿ, ಹೆಚ್ಚುವರಿ ಸಿವಿಲ್ ನ್ಯಾಯಾದೀಶ ಶಮೀರ್ ನಂದ್ಯಾಳ, ಉಪವಿಭಾಗಾಧಿಕಾರಿ ರಾಜು ಮೊಗವೀರ, ತಹಸೀಲ್ದಾರ್ ಬಸಪ್ಪ ಪೂಜಾರ, ಬಿಎಸ್‌ಎನ್‌ಎಲ್ ಕಾರವಾರ ಅಧಿಕಾರಿಗಳಾದ ಶ್ರೀವತ್ಸ ಎಂ., ಜಾವೇದ ಎಂ. ಶೇಖ, ವಕೀಲರ ಸಂಘದ ಅಧ್ಯಕ್ಷ ಎ. ರವೀಂದ್ರ ನಾಯ್ಕ, ಕಾರ್ಯದರ್ಶಿ ಶ್ರೀಪಾದ ನಾಯ್ಕ ಹಾಗೂ ಕಂದಾಯ, ಸಾರಿಗೆ, ನಗರಸಭೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com