ತಾಪಮಾನ ಏರಿಕೆಯಿಂದ ಸಮುದ್ರ ಮಟ್ಟ ಹೆಚ್ಚಳ

Updated on: 

ಕನ್ನಡಪ್ರಭ ವಾರ್ತೆ, ಕುಮಟಾ, ಜು. 3
ಇಲ್ಲಿಯ ರೋಟರಿ ಕ್ಲಬ್, ಕಾಸರಕೋಡಿನ ಸ್ನೇಹಕುಂಜ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ನವದೆಹಲಿಯ ನಮತಿ ಸಿಪಿಆರ್ ಆಶ್ರಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ 'ನಿಮ್ಮ ಧ್ವನಿಯನ್ನು ಏರಿಸಿ, ಆದರೆ ಸಮುದ್ರ ಮಟ್ಟವನ್ನಲ್ಲ' ಭಾಷಣ ಸ್ಪರ್ಧೆ ನಾದಶ್ರೀ ಕಲಾಕೇಂದ್ರದಲ್ಲಿ ಜರುಗಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾಬಲೇಶ್ವರ ಹೆಗಡೆ, ಸಮುದ್ರಮಟ್ಟ ಎಷ್ಟು ಹಾಗೂ ಏಕೆ ಏರುತ್ತಿದೆ ಎಂದು ಪ್ರತಿಯೊಬ್ಬರಿಗೂ ತಿಳಿದಿರಬೇಕು. ಜನಸಂಖ್ಯೆ ಹೆಚ್ಚಾದಂತೆ ಅವರ ಆಸೆಗಳೂ ಹೆಚ್ಚುತ್ತ ಪರಿಸರದಲ್ಲಿ ಕಾರ್ಬನ್ ಡೈಆಕ್ಸೈಡ್, ಮೊನೋಕ್ಸೈಡ್ ಹೆಚ್ಚಿ ಪರಿಸರದಲ್ಲಿ ತಾಪಮಾನ ಹೆಚ್ಚಿ ಸಮುದ್ರ ಮಟ್ಟ ಹೆಚ್ಚುವುದು ಎಂದರು.
ನಿರ್ಣಾಯಕರಾಗಿ ಆಗಮಿಸಿದ್ದ ಶ್ರೀಧರ ಭಟ್ಟ ಮಾತನಾಡಿ, ಇಂದಿನ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿದರೆ ಮಾತ್ರ ಮುಂದಿನ ಪೀಳಿಗೆಗೆ ಒಳಿತಾಗುವುದು. ಇಲ್ಲವಾದರೆ ಅದರ ಪರಿಣಾಮ ಎದುರಿಸಬೇಕಾಗುವುದು. ಆದ್ದರಿಂದ ಪರಿಸರವನ್ನು ಉಳಿಸಿಕೊಳ್ಳಲು ಯುವಕರು ಹಾಗೂ ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದು ಕರೆ ನೀಡಿದರು. ರೋಟರಿ ಕ್ಲಬ್ ಅಧ್ಯಕ್ಷೆ ಜಯಶ್ರೀ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸ್ನೇಹಕುಂಜದ ರವೀಂದ್ರ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಲಾ ಗಾವಡಿ ವಂದಿಸಿದರು. ಸ್ಪರ್ಧೆಯಲ್ಲಿ ಚಿತ್ರಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆ ವಿದ್ಯಾರ್ಥಿನಿ ದೀಪಾ ವಿ. ಭಟ್ಟ ಪ್ರಥಮ, ಕುಮಟಾ ಸಿವಿಎಸ್‌ಕೆ ಪ್ರೌಢಶಾಲೆ ವಿದ್ಯಾರ್ಥಿ ವಿನಯ ಡಿ. ಭಟ್ಟ ದ್ವಿತೀಯ, ಊರಕೇರಿ ರಾಮನಾಥ ಪ್ರೌಢಶಾಲೆ ವಿದ್ಯಾರ್ಥಿ ಪ್ರವೀಣ ವಿ. ಹೆಗಡೆ, ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಧನ್ಯಾ ಎಚ್. ನಾಯ್ಕ ತೃತೀಯ ಸ್ಥಾನ ಗಳಿಸಿದ್ದಾರೆ. ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ಹಾಗೂ ನೋಟ್‌ಬುಕ್ ವಿತರಿಸಲಾಯಿತು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com