ಆಕಾಶದೆತ್ತರ ಗುರಿ ಹೊಂದಿ

Updated on: 

ಶಿರಸಿ: ಅದ್ಭುತವೆನಿಸಬಹುದಾದ ಗುರಿಯನ್ನಿಟ್ಟುಕೊಂಡು ಅದರ ಬೆನ್ನು ಹತ್ತಿ ಯಶ ಸಾಧಿಸಬೇಕು. ಇತರರು ನಮ್ಮ ಗುರಿ ಮತ್ತು ಕನಸುಗಳ ಗಾತ್ರವನ್ನು ಕಂಡು ನಮ್ಮನ್ನು ಹುಚ್ಚರೆಂದುಕೊಂಡರೂ ಅಡ್ಡಿ ಇಲ್ಲ. ನಾವು ಮಾತ್ರ ಆಕಾಶದೆತ್ತರದ ಲಕ್ಷ್ಯವನ್ನಿಟ್ಟುಕೊಂಡು ಛಲದಿಂದ ಸಾಕಾರಗೊಳಿಸಬೇಕು. ಆಗಲೇ ವಿಸ್ಮಯಗಳು ಸಂಭವಿಸುತ್ತವೆ ಎಂಬುದಾಗಿ ಭಾರತೀಯ ಜೀವ ವಿಮಾ ನಿಗಮದ ಹುಬ್ಬಳ್ಳಿ ಶಾಖಾ ವ್ಯಾಪ್ತಿಯ ಪ್ರತಿನಿಧಿ, ಸಾಧಕಿ ಗೀತಾ ಹವಳಣ್ಣನವರ್ ತಿಳಿಸಿದರು.
ಶಿರಸಿಯ ಮಧುವನ ಹೋಟೆಲ್ಲಿನ ಆರಾಧನಾ ಸಭಾಂಗಣದಲ್ಲಿ ಶಿರಸಿ ಎಲ್‌ಐಸಿ ಯೋಗಕ್ಷೇವು ಬಳಗ ಇತ್ತೀಚೆಗೆ ಏರ್ಪಡಿಸಿದ್ದ ಪ್ರತಿನಿಧಿಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಪ್ರಾಸ್ತಾವಿಕ ಮಾತನಾಡಿದ ಯುನಿಟ್ ಮುಖ್ಯಸ್ಥ, ಹಿರಿಯ ವ್ಯವಹಾರ ಸಹವರ್ತಿ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ಎಸ್., ಗೀತಾ ಹಾಗೂ ಐಎಎಸ್ ಸಾಧಕರ ಪರಿಚಯ ಮಾಡಿದರು. ಸಾಧಕ ಡಿ.ಸಿ. ರಜತಕುಮಾರ ಅವರನ್ನು ಹಿರಿಯ ಶಾಖಾ ಪ್ರಬಂಧಕ ರಾಘವೇಂದ್ರ ಬಾಳಂಬೀಡ ಸನ್ಮಾನಿಸಿದರು. ಅನಿಸಿಕೆ ವ್ಯಕ್ತಪಡಿಸಿದ ರಜತಕುಮಾರ ಗುರಿ ಸಾಧನೆಗೆ ದೃಢ ಸಂಕಲ್ಪ ಹಾಗೂ ಸತತ ಪರಿಶ್ರಮಬೇಕು ಎಂದರು.
ಪ್ರತಿನಿಧಿ ಗಣೇಶ ಭಟ್ಟ ಹಾಗೂ ಅಭಿವೃದ್ಧಿ ಅಧಿಕಾರಿ ಎಂ.ಐ. ಹೆಗಡೆ ಮಾತನಾಡಿದರು. ಈ ಸಂದರ್ಭದಲ್ಲಿ ಯೋಗಕ್ಷೇವು ಬಳಗದ ಸಾಧಕ ಶತಕವೀರ ಪ್ರತಿನಿಧಿಗಳಾದ ಶ್ರೀಪಾದ ಎಸ್. ಹೆಗಡೆ ಕೊಂಬೆಸರ, ಮಂಜುನಾಥ ಜಿ. ನಾಯ್ಕ, ಸುಮನಾ ನಾಯ್ಕ, ಕಲ್ಪನಾ ಪೈ, ರವಿ ಹೆಗಡೆ ಗಡಿಹಳ್ಳಿ, ಸುಮಾ ಗಣೇಶ ಭಟ್, ನಾಗಾನಂದ ಹೆಗಡೆ, ಜಯಲಿಂಗ ಮಾಸೂರು, ರವಿ ಹೆಗಡೆ ಕವಲಕುಳಿ, ಚಂದ್ರಕಾಂತ ಧೋಂಗಡೆ, ವಿಜಯಾ ಶೆಟ್ಟಿ, ಸಂಗೀತಾ ಭಟ್ಕಳ, ಮೂರ್ತಿ ಕೊಡಿಯಾ ಹಾಗೂ ವಿಜಯೇಂದ್ರ ಆರ್. ಅವರನ್ನು ಸನ್ಮಾನಿಸಲಾಯಿತು. ರವಿ ಹೆಗಡೆ ಗಡಿಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com