ಆದೇಶದ ಸಾರಾಂಶ

Updated on: 

ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ವರದಿ ಆಧರಿಸಿ ಈ ಅಮಾನತ್ತು ಆದೇಶ ಹೊರಡಿಸಲಾಗಿದೆ ಎಂದಿರುವ ಅವರು 4 ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ. 1. ಬಿಸಿಯೂಟದ ಆಹಾರ ಧಾನ್ಯಗಳನ್ನು ಶಾಲೆಯ ಆವರಣ ಬಿಟ್ಟು ಬೇರೆ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದು, 2. ಒಂದಾನುವೇಳೆ ಶಾಲೆಯ ದಾಸ್ತಾನು ಕೊಠಡಿ ಸುರಕ್ಷಿತವಲ್ಲ ಎಂದಿದ್ದರೆ ಶಾಲೆಯ ಎಸ್‌ಡಿಎಂಸಿ ಅವರ ಗಮನಕ್ಕೆ ತರಬೇಕಿತ್ತು, ಅದನ್ನು ಮಾಡಿಲ್ಲ 3. ಶಾಲೆ ಪ್ರಾರಂಭವಾಗಿ 35 ದಿನಗಳಾದರೂ  ಹೊರಗಡೆ ಇರಿಸಿದ್ದ ಆಹಾರ ಧಾನ್ಯಗಳನ್ನು ಶಾಲೆಯ ದಾಸ್ತಾನು ಕೊಠಡಿಗೆ ತರದೆ ಇದ್ದುದು, ಲೆಕ್ಕ ತೋರಿಸದೆ ಇದ್ದುದು 4. ಅಕ್ಷರ ದಾಸೋಹದಿಂದ ಬಿಸಿಯೂಟಕ್ಕೆ ಪೂರೈಸಲಾದ ಅಕ್ಕಿ, ಬೆಳೆ, ಎಣ್ಣೆಯ ದಾಸ್ತಾನಿನ ಜಮಾ ತೋರಿಸದೆ ಇರುವುದು.  ಈ ಪ್ರಮುಖ 4 ಅಂಶಗಳ ಆಧಾರದ ಮೇಲೆ ಅಮಾನತು ಆದೇಶ ಹೊರಡಿಸಲಾಗಿದೆ. ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಗ್ರಾಮಸ್ಥರು ಶಿಕ್ಷಣ ಇಲಾಖೆ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮ ಸ್ವಾಗತಿಸಿದ್ದು, ಈ ರೀತಿ ತಪ್ಪು ಮಾಡುವ ಶಿಕ್ಷಕರು, ಮುಖ್ಯಾಧ್ಯಾಪಕರ ಮೇಲೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com