ಜೀವನ ಉಜ್ಜೀವನ ಒಂದೇ ಆಗಿರಲಿ

Updated on: 

ಹೊನ್ನಾವರ: ಜೀವನ, ಉಜ್ಜೀವನ ಒಂದೇ ಆಗಿರಬೇಕು. ಆ ಅವಕಾಶವಿರುವುದು ಉಪಾಧಿವಂತರಿಗೆ ಮಾತ್ರ. ಅಂಥ ಅವಕಾಶ ಪರಂಪರೆಯಿಂದ ದೊರೆತಿದ್ದು. ಶಿವನ ಚರಣದಲ್ಲಿ ಅವರಿಗೊಂದು ಅವಕಾಶವಿದೆ. ಶಿವಭಕ್ತಿ ಮಾತ್ರವಲ್ಲ ಸಮಯ ಬಂದಾಗಲೆಲ್ಲ ಗುರುಭಕ್ತಿಯನ್ನು ಮೆರೆದಿದ್ದಾರೆ.
ಗೋಕರ್ಣದ ಹೊಣೆಯನ್ನು ಶ್ರೀಪೀಠಕ್ಕೆ ಮತ್ತೆ ಮತ್ತೆ ನೆನಪಿಸಿದವರು. ಪೀಠದ ಶಿಷ್ಯರೂ ಶಿವನ ಶಿಷ್ಯರೂ ಆಗಿರುವ ಇವರಿಗೆ ಶಿವಗುರುವಿನ ಆಶೀರ್ವಾದ ಸದಾ ಇರಲೆಂದು ಶ್ರೀ ರಾಘವೇಶ್ವರ ಶ್ರೀಗಳು ಆಶಿಸಿದರು.
ತಾಲೂಕಿನ ಕೆಕ್ಕಾರನ ಶ್ರೀರಘೂತ್ತಮ ಮಠದಲ್ಲಿ ತಮ್ಮ 21ನೇ ಜಯಚಾತುರ್ಮಾಸ್ಯ ಆರಂಭಿಸಿರುವ ಶ್ರೀಗಳು  ವಿದ್ವಾನ್ ಸತ್ಯನಾರಾಯಣ ಶರ್ಮ ಗೋಕರ್ಣ ಇವರು ರಚಿಸಿದ ಶ್ರೀಭಾರತೀ ಪ್ರಕಾಶನದ ಮೂರನೇ ಪುಸ್ತಕ 'ಮಹರ್ಷಿ ನಾರದ' ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ಲೋಕಾರ್ಪಣೆ: ನಿತ್ಯ ಸಂಚಾರ ಹೇಗೆ ಸನ್ಯಾಸಿಗಳಿಗೆ ಸಹಜವೋ ಹಾಗೇ ಸಂತ ನಾರದರೂ ತ್ರಿಲೋಕ ಸಂಚಾರಿ. ನಾರದರ ಹಾಗೆ ನಿತ್ಯ ಭಗವತ್ಸಾಮೀಪ್ಯ ನಮಗೆಲ್ಲಾ ಬರಲಿ. ನಾರದರ ಎಲ್ಲ ಕೃತಿಗಳೂ ಸಮಾಜದ ಒಳಿತಿಗೆ ಇರಲಿ ಎಂದು ಆಶೀರ್ವದಿಸಿದರು.  
ಇದೇ ಸಂದರ್ಭದಲ್ಲಿ ಶ್ರೀಗಳು ಜನಜನನೀ ಉತ್ಸವದಲ್ಲಿ ಅನುಗ್ರಹಿಸಿದ ಆಶೀರ್ವಚನದ ಸಿಡಿ ಯನ್ನು ಲೋಕಾರ್ಪಣೆಗೊಳಿಸಿದರು.
ಪೀಠಕ್ಕೆ ಸೇವೆ ಸಲ್ಲಿಸಿದ ಪಟ್ಟೆಗಾರ ಸಮಾಜಕ್ಕೂ, ಭಿಕ್ಷಾಂಗ ಪಾದಪೂಜೆ ಸೇವೆ ಸಲ್ಲಿಸಿದ ಗೋಕರ್ಣದ ಉಪಾಧಿವಂತ ಮಂಡಳದವರಿಗೂ ಒಳಿತನ್ನು ಹಾರೈಸಿದರು. ಸುಬ್ರಹ್ಮಣ್ಯ ಸುಬ್ರಾಯ ಶಾಸ್ತ್ರಿ ಚಿಟ್ಟಾಣಿ ಮಹರ್ಷಿ ನಾರದ ಪುಸ್ತಕದ ಪ್ರಾಯೋಜಕತ್ವ ವಹಿಸಿದ್ದರು. ಎಸ್.ಜಿ. ಭಟ್ಟ ಕಬ್ಬನಗದ್ದೆ ನಿರ್ವಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com