ಕಾರವಾರ:ಮುಂಡಗೋಡ್ನಲ್ಲಿ ಗೊದ್ರೇಜ್ ಕಪಾಟಿಗೆ ಕನ್ನಡಿ ಅಳವಡಿಸುವುದಾಗಿ ಹೇಳಿ ರು. 67 ಸಾವಿರ ಮೌಲ್ಯದ 24 ಗ್ರಾಂ ಬಂಗಾರ ಲಪಟಾಯಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಂಭುಲಿಂಗೇಶ ಅಣ್ಣಪ್ಪ ಬಂಧಿತ ಆರೋಪಿ.
ಈತ ಜು. 4ರಂದು ಮುಂಡಗೋಡ್ ಬೆಡಸ್ಗಾಂವ್ನ ವಿದ್ಯಾ ತುಕಾರಮ್ ನಾಯ್ಕ ಮನೆಗೆ ಪಾತ್ರೆ ಮಾರಾಟ ಮಾಡಲು ಬಂದು ಮನೆ ಗೊದ್ರೇಜ್ ಕಪಾಟಿನ ಕನ್ನಡಿಯನ್ನು ಹಾಕಿಕೊಡುವುದಾಗಿ ಹೇಳಿ ಕಪಾಟನ್ನು ಪರಿಶೀಲಿಸಿ ಕಪಾಟಿನ ಒಳಗಡೆ ಬಾಕ್ಸಿನಲ್ಲಿದ್ದ ಬಂಗಾರದ ಚೈನ್ ಕಳುವು ಮಾಡಿದ್ದ. ಆರೋಪಿಯಿಂದ ಕದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.