ಅತ್ಯಾಚಾರ ತಡೆ: ರಾಜ್ಯ ಸರ್ಕಾರ ವಿಫಲ

Updated on: 

ಶಿರಸಿ: ರಾಜ್ಯಾದ್ಯಂತ ಹೆಚ್ಚುತ್ತಿರುವ ಅತ್ಯಾಚಾರ ತಡೆಗಟ್ಟಲು ವಿಫಲವಾಗಿರುವ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಕಾರ್ಯವೈಖರಿ ವಿರೋಧಿಸಿ ಬಿಜೆಪಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಬಿಜೆಪಿ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಚನ್ನಪಟ್ಟಣ ಬಜಾರ್, ಜೂ ಸರ್ಕಲ್ ಮೂಲಕ ಸಾಗಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ಜಮೆಗೊಂಡಿತು. ಕಾಂಗ್ರೆಸ್ ಆಡಳಿತ ಕಾರ್ಯವೈಖರಿ, ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಕೆ.ಜೆ. ಜಾರ್ಜ್ ವಿರುದ್ಧ ಘೋಷಣೆ ಕೂಗಿ ರಾಜಿನಾಮೆಗೆ ಆಗ್ರಹಿಸಲಾಯಿತು. ನಂತರ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸದಾನಂದ ಭಟ್ಟ ನಡಗೋಡ ಹಾಗೂ ರೈತಮೋರ್ಚಾ ಅಧ್ಯಕ್ಷ ಎನ್.ವಿ. ಹೆಗಡೆ ಮಾತನಾಡಿ, ರಾಜ್ಯಾದ್ಯಂತ ಅತ್ಯಾಚಾರ ನಡೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆ ಮಾಡುತ್ತಿದ್ದಾರೆ. ಅವರ ಜನಪರ ಕಾಳಜಿಗೆ ಇದೊಂದು ಉದಾಹರಣೆಯಾಗಿದೆ. ಬೆಂಗಳೂರು ನಗರ ಉದ್ಯಾನ ನಗರಿಯಾಗಿದ್ದು, ಈಗ ಅತ್ಯಾಚಾರ ನಗರಿಯಾಗಿ ಬದಲಾಗುತ್ತಿದೆ. ಆದರೆ, ಸಿಎಂ ಹಾಗೂ ಗೃಹ ಸಚಿವರು ತಮಗೆ ಸಂಬಂಧವೇ ಇಲ್ಲವೇನೋ ಎನ್ನುವಂತೆ ವರ್ತಿಸುತ್ತಿದ್ದಾರೆ. ಕೂಡಲೇ ಅತ್ಯಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಜಿಪಂ ಸದಸ್ಯ ಆರ್.ಡಿ. ಹೆಗಡೆ ಜಾನ್ಮನೆ, ಬಿಜೆಪಿ ಧುರೀಣೆ ವೀಣಾ ಭಟ್ಟ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ನಂದನ ಸಾಗರ, ವೀಣಾ ಶೆಟ್ಟಿ, ತಾಪಂ ಅಧ್ಯಕ್ಷ ಶೈಲಜಾ ನಾಯ್ಕ, ಜಿಪಂ ಸದಸ್ಯೆ ಉಷಾ ಹೆಗಡೆ ಮಾತನಾಡಿದರು. ಜಿಪಂ ಸದಸ್ಯೆ ಶೋಭಾ ನಾಯ್ಕ, ತಾಪಂ ಉಪಾಧ್ಯಕ್ಷ ದತ್ತಾತ್ರೆಯ ವೈದ್ಯ, ಎಪಿಎಂಸಿ ಅಧ್ಯಕ್ಷ ನರೇಶ ಭಟ್ಟ ಮತ್ತಿತರರು ಪ್ರತಿಭಟನೆಯಲ್ಲಿದ್ದರು.
ಅತ್ಯಾಚಾರಿಗಳನ್ನು ಶೀಘ್ರ ಬಂಧಿಸಿ
ಶಿರಸಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಬೇಕು ಹಾಗೂ ಅತ್ಯಾಚಾರಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ನಗರದ ಅಗಸೇಬಾಗಿಲಿನ ದೈವಜ್ಞ ಮಹಿಳಾ ಮಂಡಳಿ ಪದಾಧಿಕಾರಿಗಳಿಂದ ಪ್ರತಿಭಟನೆ ನಡೆಸಲಾಯಿತು. ನಗರದ ವಿವಿಧ ಬೀದಿಗಳಲ್ಲಿ ಮೌನ ಪಾದಯಾತ್ರೆ ನಡೆಸಿ ಹಣೆಗೆ ಕಪ್ಪುಪಟ್ಟಿ ಧರಿಸಿ ಆಗಮಿಸಿದ್ದ ಪದಾಧಿಕಾರಿಗಳು ಸಹಾಯಕ ಆಯುಕ್ತ ರಾಜು ಮೊಗವೀರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಸಂಧ್ಯಾ ಕುರ್ಡೇಕರ್, ಪ್ರೇಮಾ ಶೇಟ್, ವಿನೋದಾ ಶೇಟ್, ಖಜಾಂಚಿ ಗೀತಾ ಸಂತೋಷ, ವೇರ್ಣೇಕರ್ ಇತರರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com