ಐಚ್ಛಿಕ ವಿಷಯ ಬದಲಿಸಬೇಡಿ

Updated on: 

ಜೋಯಿಡಾ: ಇಲ್ಲಿನ ಪದವಿ ಕಾಲೇಜಿನ ಹಿಂದಿನ ಪ್ರಾಂಶುಪಾಲರ ಒತ್ತಡಕ್ಕೆ ಬಡಪಾಯಿ ವಿದ್ಯಾಥಿಗಳು ತಮ್ಮ ಐಚ್ಛಿಕ ವಿಷಯದಿಂದ ವಂಚಿತರಾಗಿ ಇಷ್ಟವಿಲ್ಲದ ಬೇರೆ ವಿಷಯವನ್ನು ಒತ್ತಾಯಪೂರ್ವಕವಾಗಿ ಅಧ್ಯಯನ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಗೆ ಬೇಸತ್ತು ವಿಷಯ ಬದಲಾವಣೆ ಮಾಡಿ ಎಂದು ಹಾಲಿ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಪ್ರಸಕ್ತ ಶೈಕಕ್ಷಣಿಕ ವರ್ಷ ಆರಂಭದಲ್ಲೇ ತಾಲೂಕಿನ ಬಡ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಕಾಲೇಜಿಗೆ ಬಂದಾಗ ವಿದ್ಯಾರ್ಥಿಗಳ ಆಸಕ್ತ ವಿಷಯ ರಾಜಶಾಸ್ತ್ರ ಪಡೆಯಲು ಅಂದಿನ ಪ್ರಾಂಶುಪಾಲ ಹಾಗೂ ಕಾಲೇಜಿನ ಮೇಲ್ವಿಚಾರಕ ಮಕ್ಕಳನ್ನೂ ಒತ್ತಾಯಪೂರ್ವಕ ನಿರಾಕರಿಸಿದ್ದು, ಇದರಿಂದ ವಿದ್ಯಾರ್ಥಿಗಳು ಐಚ್ಛಿಕ ವಿಷಯ ಬಿಟ್ಟು ಸಿಬ್ಬಂದಿ ಒತ್ತಡಕ್ಕೆ ಮಣಿದು ಬೇರೆ ವಿಷಯ ಪಡೆದು ಕಲಿಯಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಈ ಬಗ್ಗೆ ಬೇಸತ್ತ ವಿದ್ಯಾರ್ಥಿಗಳು ಇಂದು ನೂತನ ಪ್ರಾಂಶುಪಾಲ ಡಾ. ರಮೇಶ ಕರ್ಕಿಯವರಿಗೆ ಮನವಿ ನೀಡಿ ಐಚ್ಛಿಕ ವಿಷಯ ಕಲಿಕೆಗೆ ಅವಕಾಶ ನೀಡುವಂತೆ ವಿನಂತಿಸಿದ್ದಾರೆ.
ಈಗಾಗಲೆ ಪ್ರವೇಶಾವಕಾಶ ಮುಗಿದಿದ್ದು, ಈಗ ವಿಷಯ ಬದಲಾವಣೆಗೆ ವಿದ್ಯಾರ್ಥಿಯೊಬ್ಬರಿಗೆ ತಲಾ ರು. 2,500 ಖರ್ಚು, ವೆಚ್ಚ ತಗುಲಲಿದ್ದು, ಕನಿಷ್ಠ 15 ವಿದ್ಯಾರ್ಥಿಗಳಾದರೂ ಈ ಹಣ ತುಂಬಿದರೆ ವಿಷಯ ಬದಲಾವಣೆಗೆ ಅವಕಾಶ ನೀಡಬಹುದಾಗಿದೆ ಎಂದು ಪ್ರಾಂಶುಪಾಲ ಡಾ. ಕರ್ಕಿ ತಿಳಿಸುತ್ತಿದ್ದಾರೆ. ಆದರೆ, ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಇದು ಅಸಾಧ್ಯವಾದ ಮಾತು. ಒಟ್ಟಾರೆ ತಾಲೂಕಿನ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಹಾಗೂ ಸಿಬ್ಬಂದಿಯೊಬ್ಬರು ವಿಷಯ ಆಯ್ಕೆಯಲ್ಲಿ ದಾರಿ ತಪ್ಪಿಸಿ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡಿದರೆ, ಇದ್ಯಾವುದನ್ನು ಅರಿಯದೆ ಒತ್ತಡಕ್ಕೆ ಮಣಿದು ವಿಷಯ ಬದಲಾವಣೆ ಮಾಡಿದ ವಿದ್ಯಾರ್ಥಿಗಳು ಪೇಚಾಡುತ್ತಿದ್ದಾರೆ. ಈ ಅನ್ಯಾಯಕ್ಕೆ ಜವಾಬ್ದಾರರಾರು ಯಾರು ಎನ್ನುವ ಪ್ರಶ್ನೆ ಪಾಲಕರನ್ನು ಕಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com