ಕುಮಟಾ: ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸರಸ್ವತಿ ವಿದ್ಯಾಕೇಂದ್ರದಲ್ಲಿ ಶಾಲಾ ಸಂಸತ್ ಉದ್ಘಾಟನೆ ಮತ್ತು ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು. ಮಾಜಿ ಸೈನಿಕ, ಎಲ್ಐಸಿ ಮ್ಯಾನೇಜರ್ ಬಿ.ಕೆ. ರವಿಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬದುಕಿನಲ್ಲಿ ಜ್ಞಾನ ಸಂಪಾದನೆ ಅತೀ ಅವಶ್ಯ. ಜತೆಗೆ ಉತ್ತಮ ಗುಣ, ಗೆಲುವಿನ ಹಂಬಲ, ನಾಯಕತ್ವದ ಗುಣಗಳೂ ಸೇರಿರಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ವಿಶ್ವಸ್ಥರಾದ ರಮೇಶ ಪ್ರಭು ಮಾತನಾಡಿದರು. ಶಾಲಾ ಸಂಸತ್ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸುಮಂಗಲಾ ನಾಯ್ಕ ಪ್ರಮಾಣವಚನ ಬೋಧಿಸಿದರು. ಸರಸ್ವತಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಲೀಲಾವತಿ ನಾಯ್ಕ, ಶಿಕ್ಷಕ ಆರ್.ಎಚ್. ದೇಶಭಂಡಾರಿ ಉಪಸ್ಥಿತರಿದ್ದರು. ಮಕ್ಕಳು ನಾನೂ ಸೈನಿಕನಾಗುವೆ ರೂಪಕ ಪ್ರಸ್ತುತ ಪಡಿಸಿದರು. ಲಕ್ಷ್ಮೀ ಹೆಗಡೆ ಅವರ ಸಂಯೋಜನೆಯಲ್ಲಿ ಮಕ್ಕಳು ದೇಶಭಕ್ತಿಗೀತೆ ಹಾಡಿದರು. ಮುಖ್ಯ ಶಿಕ್ಷಕಿ ಸುಜಾತಾ ನಾಯ್ಕ ಸ್ವಾಗತಿಸಿದರು. ಗೀತಾ ಪಟಗಾರ ನಿರೂಪಿಸಿದರು. ಸಾವಿತ್ರಿ ಹೆಗಡೆ ವಂದಿಸಿದರು.