ವೇದ-ನಾದಗಳು ರಾಮನಿಗೆ ಪ್ರಿಯ

Updated on: 

ಹೊನ್ನಾವರ: ಇಂದು ವೇದ ಮತ್ತು ನಾದದ ಸಂಗಮವಾಗಿದೆ. ವೇದವನ್ನು ತನ್ನ ಬದುಕಿಗೆ ಇಳಿಸಿಕೊಂಡು ಇತರರಿಗೂ ವೇದಸ್ಪರ್ಶ ನೀಡುವ ವೈದಿಕರೊಂದು ಕಡೆ, ನಾದದಿಂದ ದೇವನನ್ನು ಸಂಪ್ರೀತಗೊಳಿಸುವ ಭಂಡಾರಿ ಸಮಾಜದವರು ಇನ್ನೊಂದು ಕಡೆ. ನಿಜಕ್ಕೂ ಇಂದು ಕೆಕ್ಕಾರಿನಲ್ಲಿ ವೇದ ಮತ್ತು ನಾದದ ಸಂಗಮವಾಗಿದೆ. ಇವೆರಡೂ ರಾಮನಿಗೆ ಪ್ರಿಯವಾದವುಗಳೆಂದು ರಾಘವೇಶ್ವರ ಶ್ರೀಗಳು ನುಡಿದರು.
ಚಾತುರ್ಮಾಸ್ಯದ ನಿಮಿತ್ತ ನಡೆದ ವೈದಿಕ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿ, ವೈದಿಕನೆಂದರೆ ಮಂಗಲ, ಅವನಿಲ್ಲದಿರೆ ಸಮಾಜ ಅಮಂಗಲ, ಸಮಾಜ ಉಚ್ಛ ಗೌರವದಲ್ಲಿ ವೈದಿಕರನ್ನು ಕಾಣಬೇಕೆನ್ನುವುದು ನಮ್ಮ ಹಂಬಲ ಎಂದರು.
ವೈದಿಕರನ್ನು ವರಿಸುವ ಕನ್ಯೆಯನ್ನು ಶ್ರೀಮಠದಿಂದ ಗೌರವಿಸುವ ಮಾತನ್ನು ಪುನರುಚ್ಛರಿಸಿದ ಅವರು ಕೆಕ್ಕಾರು ಮಠ ಇಂದಿನ ಸಂಗಮದಿಂದ ಮಂಗಲವಾಯಿತು ಎಂದರು.
ವೈದಿಕ ಸಮಾವೇಶದಲ್ಲಿ ಸೂರ್ಯನಾರಾಯಣ ಭಟ್ಟ ಹಿತ್ಲಳ್ಳಿ ಅಧ್ಯಕ್ಷತೆ ವಹಿಸಿ ಪಂಚಮೂರ್ತಿ ಪೂಜೆ ಕುರಿತು ಮಾತನಾಡಿದರು. ಶ್ರೀನಿವಾಸ ಭಟ್ಟ ಮಂಜಗುಣಿ ಪಂಚಬ್ರಹ್ಮ ಕುರಿತು ತಿಳಿಸಿದರು. ಶತಕಂಠ ಘೋಷ ನಡೆಯಿತು. ಧರ್ಮ ಪ್ರಧಾನ ಶ್ರೀಪಾದ ಭಟ್ಟ ಸಮಾವೇಶದ ವಿಷಯ ಮಂಡಿಸಿದರು. ಶ್ರೀಭಾರತೀ ಪ್ರಕಾಶನದವರು ಪ್ರಕಟಪಡಿಸಿದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳು ಕೃತಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.
ಲೇಖಕಿ ಲಲಿತಾಲಕ್ಷ್ಮೀ, ಪ್ರಾಯೋಜಕ ಲಕ್ಷ್ಮೀನಾರಾಯಣ ರಾಮಚಂದ್ರ ಭಟ್ಟ ಕಲ್ಲಟ್ಟಿ ಉಪಸ್ಥಿತರಿದ್ದರು. ಲಲಿತಾಲಕ್ಷ್ಮೀ ಬರೆದ ಶಂಕರಗೀತೆ ಪುಸ್ತಕವನ್ನು ಎಂ.ಆರ್. ಸತ್ಯನಾರಾಯಣ ಬಿಡುಗಡೆಗೊಳಿಸಿದರು. ವಿದ್ವಾಂಸರಾದ ಶ್ರೀನಿವಾಸ ಭಟ್ಟ ಮಂಜುಗುಣಿ, ಸೂರ್ಯನಾರಾಯಣ ಭಟ್ಟ ಹಿತ್ಲಳ್ಳಿ ಅವರನ್ನು ಶ್ರೀಗಳು ಅನುಗ್ರಹಿಸಿದರು. ಜಯಚಾತುರ್ಮಾಸ್ಯ ಸಮಿತಿಯ ಸಂಪರ್ಕ ಕಾರ್ಯದರ್ಶಿ ರವೀಂದ್ರ ಭಟ್ಟ ಸೂರಿ ನಿರೂಪಿಸಿದರು. ರಾಜಾರಾಮ ಹೆಬ್ಬಾರ ಕರ್ಕಿ, ಎಸ್.ಜಿ. ಭಟ್ಟ ಸಹಕರಿಸಿದರು. ಯಜುರ್ವೇದ ಪಾರಾಯಣ ರಾಮತಾರಕ ಹವನ ಅನ್ನಪೂರ್ಣೇಶ್ವರಿ ಯಾಗ ನೆರವೇರಿದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com