ಕಾರವಾರ: ಕುಡಿದು ಹೆಂಡತಿ ಪೀಡಿಸುತ್ತಿದ್ದ ವ್ಯಕ್ತಿಯನ್ನು ಸೋಮವಾರ ಇಲ್ಲಿನ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಶಿರವಾಡದ ಆಗ್ನೇಲ್ ಫರ್ನಾಡಿಸ್ ಬಂಧಿತ ವ್ಯಕ್ತಿ. ಈತ ಅನಾರೋಗ್ಯಕ್ಕೆ ಒಳಗಾಗಿದ್ದ ಪತ್ನಿ ರೂಪಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೆಲ ದಿನಗಳಿಂದ ಇದೇ ರೀತಿ ಹಿಂಸಿಸುತ್ತಿದ್ದ ಪತಿ ವಿರುದ್ಧ ರೂಪಾ ದೂರು ನೀಡಿದ್ದಳು.
ಜಗಳ: ಇಲ್ಲಿನ ಟ್ಯಾಗೋರ್ ಬೀಚ್ ಬಳಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದು, ಒಬ್ಬ ಮಾರಣಾಂತಿಕ ಹಲ್ಲೆಗೊಳಗಾದ ಘಟನೆ ನಡೆದಿದೆ. ಎಂಡ್ರೋ ರೋಜಾರಿಯೋ ಹಲ್ಲೆಗೊಳಗಾದವ. ತನ್ನ ತಮ್ಮನಿಗೆ ನಿಂದಿಸಿರುವ ಬಗ್ಗೆ ವಿಶ್ವಜಿತ್ ಬಳಿ ಕೇಳಿದಾಗ ಕುಪಿತಗೊಂಡು ಎಂಡ್ರೋ ಮೇಲೆ ಹಲ್ಲೆ ನಡೆಸಿದ್ದಾನೆ. ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.