ಸಂಪಾದಕೀಯ
ಹಳೆಯ ಹಾಡುಗಳಿಗೂ ಹೊಸ ಹಾಡುಗಳಿಗೂ ವ್ಯತ್ಯಾಸವೇನು?
ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ
ಹಳೆಯ ಹಾಡುಗಳಿಗೂ ಹೊಸ ಹಾಡುಗಳಿಗೂ ವ್ಯತ್ಯಾಸವೇನು?
ಹಳೆಯ ಹಾಡುಗಳಲ್ಲಿ ಮಧುರಭಾವ, ಈಗಿನವುಗಳಲ್ಲಿ ಮಧುರ ಅಭಾವ!
ವಿ. ಹೇಮಂತಕುಮಾರ, ಬೆಂಗಳೂರು, 9901739104
ನೀರು ಕೇಳಿದರೆ ಪಾನಕ ಕೊಡುತ್ತಾಳಲ್ಲ?
ಕೇರಳದಲ್ಲಿ ನೀರು ಕೇಳಿದರೆ ನೀರಾ ಕೊಡ್ತಾರಂತೆ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಕೆಲವು ಹೆಂಗಸರು ತಮ್ಮ ಪತಿಯ ಬಳಿ ಇರುವ ಮೊಬೈಲನ್ನು ಸವತಿ ಅಂತ ಕರೆಯುತ್ತಾರೆ ಯಾಕೆ?
ಗಂಡ ತನಗಿಂತ ಹೆಚ್ಚು ಮೊಬೈಲನ್ನೇ 'ಟಚ್' ಮಾಡುವುದರಿಂದ!
ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಹಾವಿನ ದ್ವೇಷಕ್ಕೂ ಮನುಷ್ಯನ ದ್ವೇಷಕ್ಕೂ ವ್ಯತ್ಯಾಸವೇನು?
ಹಾವು ಕಚ್ಚುತ್ತದೆ, ಮನುಷ್ಯ ಕೊಚ್ಚುತ್ತಾನೆ!
- ಬಾಣಭಟ್ಟ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ