ವರ್ಗ

ನಮ್ಮ ಗತಿಯನ್ನೇ ನಿರ್ಧರಿಸುವ ತರಗತಿ
    ಕೆಲವರನ್ನು ಮಾಸ್ ಲೀಡರ್‌ಗಳನ್ನಾಗಿಯೂ ಕೆಲವರನ್ನು ಕ್ಲಾಸ್ ಲೀಡರ್‌ಗಳನ್ನಾಗಿಯೂ ಮಾಡಿದ ಕ್ಲಾಸ್
    ವಿದ್ಯಾರ್ಥಿಗಳ ಉತ್ಸಾಹದ ಅಪವರ್ಗವಾದಾಗ ನಿದ್ರಾರ್ಥಿಗಳ ಸ್ವರ್ಗವಾಗಿ ಪರಿಣಮಿಸುವಂಥದ್ದು
    ಕ್ಷಣಕ್ಷಣವೂ ಶಿಕ್ಷಣದ್ದೇ ಗೌಜು ಇಲ್ಲಿ
    ಭೇದ ವಾದದ ಮೂಲ
    ವರ್ಗವ್ಯವಸ್ಥೆಗೆ ಕಾರಣ ರಾಜಕಾರಣ
    ಜಗತ್ತಿನಲ್ಲಿರುವುದು ಎರಡೇ ವರ್ಗ. ಸೋಮಾರಿಗಳ ವರ್ಗ, ಶ್ರಮಿಕರ ವರ್ಗ
    ಸರ್ಕಾರಿ ನೌಕರರ ನಿದ್ದೆಗೆಡಿಸುವ ವಿಷಯ
    ಹೆಚ್ಚು ಸಲ ವರ್ಗವಾಗಿದ್ದರೆಂದಾದರೆ ಆ ಅಧಿಕಾರಿ ತುಂಬಾ ಕಟ್ಟುನಿಟ್ಟು ಎಂದರ್ಥ
    ನೌಕರರನ್ನು ಅಲೆಮಾರಿಗಳನ್ನಾಗಿಸುವ ಸಂಗತಿ
    ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ 'ಎತ್ತಿ ಹಾಕು'ವುದಕ್ಕೆ ವರ್ಗ ಎನ್ನುತ್ತಾರೆ
    ಒಂದು ಅಂಕಿಗೆ ಅದೇ ಅಂಕಿಯಿಂದ ಗುಣಿಸುವುದರಿಂದ ವರ್ಗವನ್ನು ಪಡೆಯಬಹುದು
    ಬಡವ, ಬಲ್ಲಿದ, ಮೇಲೆ-ಕೆಳಗೆ, ಎಡ-ಬಲ ಎಂಬಿತ್ಯಾದಿ ಪ್ರಯೋಜನವಿಲ್ಲದ ಶ್ರೇಣೀಕರಣ

ವಿಶ್ವನಾಥ ಸುಂಕಸಾಳ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com