ಲೋಕಸಭೆ ಚುನಾವಣೆ: ಮೋದಿ, ರಾಹುಲ್ ವಿರುದ್ಧ ದಕ್ಷಿಣ ಕನ್ನಡದ ವೈದ್ಯ ಕಣಕ್ಕೆ!

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪುತ್ತೂರಿನ ವೈದ್ಯ, ಪತ್ರಿಕೋದ್ಯಮಿಯೊಬ್ಬರು ಈ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಹೈವೋಲ್ಟೇಜ್ ಕ್ಷೇತ್ರಗಳಾದ ವಾರಣಾಸಿ ಹಾಗೂ ಅಮೇಥಿಯಲ್ಲಿ.....
ಲೋಕಾಸಮರ: ಮೋದಿ , ರಾಹುಲ್ ವಿರುದ್ಧ ಕಣಕ್ಕಿಳಿದ ದಕ್ಷಿಣ ಕನ್ನಡ ವ್ಯಕ್ತಿ!
ಲೋಕಾಸಮರ: ಮೋದಿ , ರಾಹುಲ್ ವಿರುದ್ಧ ಕಣಕ್ಕಿಳಿದ ದಕ್ಷಿಣ ಕನ್ನಡ ವ್ಯಕ್ತಿ!
Updated on
ಮಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪುತ್ತೂರಿನ ವೈದ್ಯ, ಪತ್ರಿಕೋದ್ಯಮಿಯೊಬ್ಬರು ಈ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಹೈವೋಲ್ಟೇಜ್ ಕ್ಷೇತ್ರಗಳಾದ ವಾರಣಾಸಿ ಹಾಗೂ ಅಮೇಥಿಯಲ್ಲಿ ಪಕ್ಷೇತರವಾಗಿ ಚುನಾವಣೆ ಎದುರಿಸುತ್ತಿದ್ದಾರೆ. ಅಂದಹಾಗೆ ಈ ಪತ್ರಿಕೋದ್ಯಮಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಸ್ಪರ್ಧೆಗೆ ನಿಂತಿದ್ದಾರೆ.
ಸ್ಥಳೀಯ ದಿನಪತ್ರಿಕೆ ‘ಸುದ್ದಿ ಬಿಡುಗಡೆ’ ಪ್ರಧಾನ ಸಂಪಾದಕ ಡಾ.ಯು.ಪಿ. ಶಿವಾನಂದ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಈ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಇವರು ಹೇಳುವಂತೆ ಅವರಿಗೆ ಚಿನಾವಣೆಯ ಗೆಲುವಿ, ಸೋಲು ಮುಖ್ಯವಾಗಿಲ್ಲ, ಪ್ರಜಾಪ್ರಭುತ್ವದ ಮೂಲ ತತ್ವಗಳ ಬಗ್ಗೆ ಮತದಾರರಲ್ಲಿ ಜಾಗೃತಿ  ಮೂಡಿಸಬೇಕು, ಇದಕ್ಕಾಗಿ ತಾವೇ ಚುನಾವಣೆಗೆ ನಿಲ್ಲುವ ಮೂಲಕ ಒಂದು ಸಂದೇಶ ರವಾನಿಸಲು ಅವರು ಬಯಸಿದ್ದಾರೆ.
 "ಈ ಚುನಾವಣೆ ಮೋದಿ-ರಾಹುಲ್ ನಡುವಿನ ಹಣಾಹಣಿಯಾಗಿದೆ.ನಿಜವಾಗಿ ಪ್ರಜಾಪ್ರಭುತ್ವದ ವಿರುದ್ಧದ ನಡೆ ಇದಾಗಲಿದೆ.ಅಭ್ಯರ್ಥಿಗಳು ಮತ ಕೇಳಲು ತಮ್ಮ ಕೆಲಸಗಳನ್ನು ಉದಾಹರಣೆಯಾಗಿ ನೀಡದೆ ತಮ್ಮ ನಾಯಕರ ಹೆಸರನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ನನ್ನ ಸ್ಪರ್ಧೆ ಮೂಲಕ ಈ ಪ್ರಮುಖ ಸಂದೇಶವನ್ನು ಎಲ್ಲಾ ಮನೆಗಳಿಗೆ ತಲುಪಿಸಬೇಕೆಂದು ನಾನು ಬಯಸುತ್ತೇನೆ. ಪ್ರಜಾಪ್ರಭುತ್ವವನ್ನು ಬಲಪಡಿಸುವುದು,ನನ್ನ ಗುರಿಯಾಗಿದೆ"  ವಾರಣಾಸಿಯಿಂದ  ಶಿವಾನಂದ ಹೇಳಿದ್ದಾರೆ.
ತಾವು ಮನೇಥಿ ಹಾಗೂ ವಾರಣಾಸಿಯಲ್ಲಿ ಸ್ಪರ್ಧಿಸುವುದರಿಂದ ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಹೆಚ್ಚು ಜನರಿಗೆ ಸಂದೇಶ ರವಾನೆಯಾಗಲಿದೆ ಎಂಬುದು ಅವರ ನಿಲುವು.  "ನಾನು ಈ ಸಂದೇಶವನ್ನು ಮೋದಿ ಮತ್ತು ರಾಹುಲ್ ಅವರಿಗೆ ಸಹ ತಲುಪಿಸಲು ಬಯಸುತ್ತೇನೆ. ಹಾಗೆ ಮಾಡುವುದರಿಂದ ನನ್ನ ಪ್ರಯತ್ನದಲ್ಲಿ ನಾನು ಯಶಸ್ವಿಯಾಗುತ್ತೇನೆ."ಕಳೆದ ಕೆಲವು ದಿನಗಳಿಂದ ವಾರಣಾಸಿಯಲ್ಲಿರುವ ಶಿವಾನಂದ್ ಸಮಾಜದ ಕೆಳಸತರದ ಜನರ ಭೇಟಿಯಲ್ಲಿ ನಿರತರಾಗಿದ್ದಾರೆ. ಅವರ ಅಭ್ಯರ್ಥಿಗಾ ಅವರು ಮತ ಹಾಕಬೇಕೆ ಹೊರತು ಆ ಪಕ್ಷಗಳ ನಾಯಕರ ಮುಖ ನೋಡಿಯಲ್ಲ ಎಂದು ಅವರು ಜನರಿಗೆ ತಿಳುವಳಿಕೆ ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ವಿವಿಧ ರಾಜಕೀಯ ಪಕ್ಷಗಳಿಂದ ಎದುರಾಗಿರುವ ಅಪಾಯದ ಬಗೆಗೆ ಪತ್ರವೊಂಡನ್ನು ಪ್ರಕಟಿಸಿರುವ ಶಿವಾನಂದ್ ಪ್ರಜಾಪ್ರಭುತ್ವವನ್ನು ಉಳಿಸುವ ಸಮಯವಿದಾಗಿದೆ ಎನ್ನುತ್ತಾರೆ.
ಶಿವಾನಂದ್ ಇದಾಗಲೇ ಅಮೇಥಿ ಹಾಗೂ ವಾರಣಾಸಿಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನು ಶಿವಾನಂದ್ ಇದೇನೂ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿಲ್ಲ, ಈ ಹಿಂದೆ . 2009 ರಲ್ಲಿ ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 4,825 ಮತಗಳನ್ನು ಪಡೆದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com