ಮೋದಿ ಮತ್ತೊಮ್ಮೆ: ಜೋರಾಗಿದೆ ಬುಕ್ಕಿಗಳ ಬೆಟ್ಟಿಂಗ್!

ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಇತ್ತ ಬುಕ್ಕಿಗಳ ಬೆಟ್ಟಿಂಗ್ ಸಹ ಜೋರಾಗಿಯೇ ಇದೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
ಜೈಪುರ: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಇತ್ತ ಬುಕ್ಕಿಗಳ ಬೆಟ್ಟಿಂಗ್ ಸಹ ಜೋರಾಗಿಯೇ ಇದೆ. 
ಜೋಧ್ ಪುರ ಜಿಲ್ಲೆಯಲ್ಲಿ ಬುಕ್ಕಿಗಳು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಮತ ಸಿಗಲಿದೆ ಎಂಬ ಬಗ್ಗೆ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. 
ರಾಜಸ್ಥಾನದಲ್ಲಿ ಬಿಜೆಪಿ 20-22 ಲೋಕಸಭಾ ಸ್ಥಾನಗಳನ್ನು ಗಳಿಸಲಿದ್ದು, ಉಳಿದ 3-5 ಸ್ಥಾನಗಳನ್ನು ಕಾಂಗ್ರೆಸ್ ಗಳಿಸಲಿದೆ ಎಂದು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. 
ರಾಜಸ್ಥಾನದ ನಿರ್ಣಾಯಕ ಸ್ಥಾನವಾದ ಜೈಪುರದಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಕೇಂದ್ರ ಸಚಿವ ಗಜೇಂಡ್ರ ಸಿಂಗ್ ಶೇಖಾವತ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್ ನ್ನು ಎದುರಿಸುತ್ತಿದ್ದಾರೆ. 
ಶೇಖಾವತ್ ಗೆಲುವಿನ ಕುರಿತು ಬೆಟ್ಟಿಂಗ್ ರೇಟ್ 80 ಪೈಸೆ ಇದ್ದರೆ, ವೈಭವ್ ಗೆಲುವಿನ ಕುರಿತ ಬೆಟ್ಟಿಂಗ್ ರೇಟ್ 1.25-1.50 ರೂಪಾಯಿಗಳಿದೆ ಎಂದು ಬುಕ್ಕಿಯೋರ್ವ ಮಾಹಿತಿ ನೀಡಿದ್ದಾನೆ. 
ವೀಕ್ ಎಂಡ್ ಗಳಲ್ಲಿ  ಬುಕ್ಕಿಗಳು ಮಾಹಿತಿ ಸಂಗ್ರಹಿಸುತ್ತಾರೆ, ನಂತರ ಇಡೀ ದೇಶದ ಮಟ್ಟದಲ್ಲಿ ಸ್ಪಷ್ಟ ವಿಶ್ಲೇಷಣೆ ನೀಡುತ್ತಾರೆ. ಈ ವಿಶ್ಲೇಷಣೆಯ ಪ್ರಕಾರ ಬಿಜೆಪಿಗೆ ಒಟ್ಟಾರೆ 250 ಸ್ಥಾನಗಳು ಸಿಗಲಿದೆ, ಕಾಂಗ್ರೆಸ್ ಗೆ 70 ಸ್ಥಾನ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಈ ಬಗ್ಗೆ ಹೆಚ್ಚಿನ ವಿಶ್ವಾಸವಿದೆ. ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದರ ಬೆಟ್ಟಿಂಗ್ ನಲ್ಲಿ ಮಾರುಕಟ್ಟೆಯಲ್ಲಿ ಒಂದು ಪೈಸೆ ರೇಟ್ ಇದೆ ಎಂದು ಬುಕ್ಕಿ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com