ಪತ್ನಿ ಜೊತೆ ಶತೃಘ್ನ ಸಿನ್ಹಾ
ದೇಶ
ಲಕ್ನೋ: ರಾಜನಾಥ್ ಸಿಂಗ್ ವಿರುದ್ಧ ಶತೃಘ್ನ ಸಿನ್ಹಾ ಪತ್ನಿ ಪೂನಂ ಸ್ಪರ್ಧೆ
ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಬಾಲಿವುಡ್ ನಟ ಶತ್ರುಘ್ನ ಸಿನ್ಹಾರ ಪತ್ನಿ ಪೂನಂ ಸಿನ್ಹಾ ಅವರು ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ....
ಲಕ್ನೋ: ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಬಾಲಿವುಡ್ ನಟ ಶತ್ರುಘ್ನ ಸಿನ್ಹಾರ ಪತ್ನಿ ಪೂನಂ ಸಿನ್ಹಾ ಅವರು ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ.
ಪೂನಂ ಸಿನ್ಹಾ ಲಕ್ನೋ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ವಿರುದ್ಧ ಸಮಾಜವಾದಿ ಪಕ್ಷ (ಎಸ್‍ಪಿ)ದಿಂದ ಸ್ಪರ್ಧಿಸುತ್ತಿದ್ದು, ಇವರಿಗೆ ಬಿಎಸ್‍ಪಿ ಕೂಡ ಬೆಂಬಲ ಸೂಚಿಸಿದೆ.
ಪೂನಂರನ್ನು ಬೆಂಬಲಿಸುವ ಸಲುವಾಗಿ ಕಾಂಗ್ರೆಸ್ ಪಕ್ಷವು ಇಲ್ಲಿ ಅಭ್ಯರ್ಥಿಯನ್ನು ನಿಲ್ಲಿಸದಿರಲು ನಿರ್ಧರಿಸಿರುವುದರಿಂದ ಲಕ್ನೋದಲ್ಲಿ ರಾಜನಾಥ್ ಸಿಂಗ್ ಹಾಗೂ ಪೂನಂ ಸಿನ್ಹಾರ ನಡುವೆ ಪ್ರಬಲ ಪೈಪೋಟಿ ಏರ್ಪಡುವ ನಿರೀಕ್ಷೆಯಿದೆ..
ಬಿಜೆಪಿ ಮಹಾ ಪ್ರಧಾನ ಕಾರ್ಯದರ್ಶಿ ವಿಜಯ್ ಪಠಾಕ್ ಮಾತನಾಡಿ, ಲಖನೌ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದ್ದು, ರಾಜನಾಥ್ ಸಿಂಗ್ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಮತದಾರರು ಈ ಬಾರಿ ಅವರನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ