ಚೌಕೀದಾರ್ ಮೋದಿ ಕಳ್ಳ ಅಷ್ಟೇ ಅಲ್ಲ, ಹೇಡಿಯೂ ಹೌದು: ರಾಹುಲ್ ಗಾಂಧಿ

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚೌಕೀದಾರ ಕೇವಲ ಕಳ್ಳನಲ್ಲ, ಹೇಡಿಯೂ ಹೌದು ಎಂದು ಹೇಳಿದ್ದಾರೆ.
ಚೌಕೀದಾರ್ ಮೋದಿ ಕಳ್ಳ ಅಷ್ಟೇ ಅಲ್ಲ, ಹೇಡಿಯೂ ಹೌದು: ರಾಹುಲ್ ಗಾಂಧಿ
ಚೌಕೀದಾರ್ ಮೋದಿ ಕಳ್ಳ ಅಷ್ಟೇ ಅಲ್ಲ, ಹೇಡಿಯೂ ಹೌದು: ರಾಹುಲ್ ಗಾಂಧಿ
Updated on
ಅಸ್ಸಾಂ: ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚೌಕೀದಾರ ಕೇವಲ ಕಳ್ಳನಲ್ಲ, ಹೇಡಿಯೂ ಹೌದು ಎಂದು ಹೇಳಿದ್ದಾರೆ. 
ಮೋದಿ ವಿರೋಧ ಪಕ್ಷದ ನಾಯಕನೊಂದಿಗೆ ನೇರವಾಗಿ ಚರ್ಚೆಗೆ ಬರುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಚೌಕೀದಾರ ಕಳ್ಳ ಮಾತ್ರ ಅಲ್ಲ ಹೇಡಿ ಕೂಡಾ ಹೌದು. ಕಳೆದ 5 ವರ್ಷಗಳಲ್ಲಿ ಮೋದಿ ಯೋಜನೆಗಳು ಶ್ರೀಮಂತ ಉದ್ಯಮಿಗಳಾದ ಅನಿಲ್ ಅಂಬಾನಿ, ಮೆಹುಲ್ ಚೊಕ್ಸಿ, ನೀರವ್ ಮೋದಿಗೆ ಸಹಕಾರಿಯಾಗಿದೆ ಎಂದು ರಾಹುಲ್ ಟೀಕಾಪ್ರಹಾರ ನಡೆಸಿದ್ದಾರೆ. 
ಚೌಕೀದಾರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದ್ದರಿಂದ ನಾನು ನನ್ನೊಂದಿಗೆ ಚರ್ಚೆಗೆ ಆಹ್ವಾನಿಸಿದ್ದೆ. ಆದರೆ ಧೈರ್ಯ ಇಲ್ಲದೇ ತಪ್ಪಿಸಿಕೊಂಡರು ಎಂದು ಅಸ್ಸಾಂ ನ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ. 
ಕೇವಲ 15 ಜನಕ್ಕೆ ಅನುಕೂಲ ಮಾಡಿಕೊಡಲು ಮೋದಿ 5 ವರ್ಷ ಸರ್ಕಾರ ನಡೆಸಿದ್ದಾರೆ. 2019 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇವಲ ಬಡವರಿಗೆ ಹಣ ನೀಡುವುದು ಸುದ್ದಿಯಾಗಲಿದೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com