ಬಿಜೆಪಿ ಪ್ರಣಾಳಿಕೆಯಲ್ಲಿ ಪ್ರಮಾದ: ಮುಲಾಜಿಲ್ಲದೇ ಪಕ್ಷಕ್ಕೆ ಝಾಡಿಸಿದ ಸುಬ್ರಹ್ಮಣಿಯನ್ ಸ್ವಾಮಿ!

ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ತಮ್ಮ ನೇರ ನುಡಿಗಳಿಂದ ಪಕ್ಷವನ್ನೇ ಟೀಕಿಸಿ ಅನೇಕ ಬಾರಿ ಮುಜುಗರ ಉಂಟುಮಾಡಿದ್ದಾರೆ. ಈಗ ಇಂಥಹದ್ದೇ ವಿಷಯಕ್ಕೆ ಸುಬ್ರಹ್ಮಣಿಯನ್ ಸ್ವಾಮಿ ಸುದ್ದಿಯಾಗಿದ್ದಾರೆ.
ಸುಬ್ರಹ್ಮಣಿಯನ್ ಸ್ವಾಮಿ
ಸುಬ್ರಹ್ಮಣಿಯನ್ ಸ್ವಾಮಿ
Updated on
ನವದೆಹಲಿ: ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ತಮ್ಮ ನೇರ ನುಡಿಗಳಿಂದ ಪಕ್ಷವನ್ನೇ ಟೀಕಿಸಿ ಅನೇಕ ಬಾರಿ ಮುಜುಗರ ಉಂಟುಮಾಡಿದ್ದಾರೆ. ಈಗ ಇಂಥಹದ್ದೇ ವಿಷಯಕ್ಕೆ ಸುಬ್ರಹ್ಮಣಿಯನ್ ಸ್ವಾಮಿ ಸುದ್ದಿಯಾಗಿದ್ದಾರೆ. 
ಇತ್ತೀಚೆಗಷ್ಟೇ ಬಿಜೆಪಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯ ಬಗ್ಗೆ ಸ್ವಾಮಿ ಟ್ವೀಟ್ ಮಾಡಿದ್ದು, ಎರಡು ಪ್ರಮಾದಗಳನ್ನು ಮುಲಾಜಿಲ್ಲದೇ ಬಹಿರಂಗವಾಗಿ ಪಕ್ಷದ ಮುಖಕ್ಕೆ ಹಿಡಿದಿದ್ದಾರೆ. 
ಪಕ್ಷದ ಚುನಾವಣಾ ಪ್ರಣಾಳಿಕೆ ‘ಸಂಕಲ್ಪ ಪತ್ರ’ದಲ್ಲಿ 2022ರೊಳಗೆ ದೇಶದ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಭರವಸೆಯನ್ನು ನೀಡಲಾಗಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸುಬ್ರಹ್ಮಣಿಯನ್ ಸ್ವಾಮಿ ರೈತರ ಆದಾಯವನ್ನು 2022 ರೊಳಗೆ ದುಪ್ಪಟ್ಟುಗೊಳಿಸಬೇಕಾದರೆ ದೇಶ ವರ್ಷಕ್ಕೆ ಶೇ.24ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಬೇಕಾಗುತ್ತದೆ. ಆದರೆ ಇಷ್ಟು ಪ್ರಗತಿಯನ್ನು ನಂಬುವುದಕ್ಕೆ ಸಾಧ್ಯವಿಲ್ಲ. ಶೇ.24 ರಷ್ಟರ ಬದಲು ಶೇ.10 ರಷ್ಟು ಆರ್ಥಿಕ ಬೆಳವಣಿಗೆ ಸಾಧ್ಯ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com