ತುಮಕೂರಿನಲ್ಲಿ ಹಕ್ಕು ಚಲಾಯಿಸಿದ ನವದಂಪತಿ
ದೇಶ
ಲೋಕಸಭೆ ಚುನಾವಣೆ: 2ನೇ ಹಂತ ಬಹುತೇಕ ಶಾಂತಿಯುತ, ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಮತದಾನ
2019ರ ಸಾರ್ವತ್ರಿಕ ಚುನಾವಣೆಯ ಎರಡನೇ ಹಂತದ ಮತದಾನ ಗುರುವಾರ ಬಹುತೇಕ ಶಾಂತಿಯುತವಾಗಿ ಅಂತ್ಯಗೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ಅತಿ...
ನವದೆಹಲಿ: 2019ರ ಸಾರ್ವತ್ರಿಕ ಚುನಾವಣೆಯ ಎರಡನೇ ಹಂತದ ಮತದಾನ ಗುರುವಾರ ಬಹುತೇಕ ಶಾಂತಿಯುತವಾಗಿ ಅಂತ್ಯಗೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಶೇ.76.43ರಷ್ಟು ಮತದಾನವಾಗಿದೆ.
ಇಂದು ಕರ್ನಾಟಕ ಸೇರಿದಂತೆ 11 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 95 ಲೋಕಸಭಾ ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ನಡೆದಿದ್ದು, ಪಶ್ಚಿಮ ಬಂಗಾಳ ಮತ್ತು ಛತ್ತೀಸ್ ಗಢದಲ್ಲಿ ನಡೆದ ಕೆಲ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿತ್ತು.
ಸಂಜೆ 6 ಗಂಟೆಯವರೆಗೆ ರಾಜ್ಯಗಳಲ್ಲಿ ಶೇಕಡಾವಾರು ಮತದಾನದ ವಿವರ
ಪಶ್ಚಿಮ ಬಂಗಾಳ - ಶೇ.76.43
ಅಸ್ಸಾಂನಲ್ಲಿ - ಶೇ. 75. 61
ಛತ್ತೀಸ್ ಗಢ- ಶೇ. 70.31
ಜಮ್ಮು ಮತ್ತು ಕಾಶ್ಮೀರ - ಶೇ.43.71
ಕರ್ನಾಟಕ - ಶೇ.64.45
ಮಹಾರಾಷ್ಟ್ರ - ಶೇ.57.87
ಮಣಿಪುರ - ಶೇ.76.1
ಒಡಿಶಾ - ಶೇ. 57.81
ತಮಿಳು ನಾಡು - ಶೇ. 62.65
ಉತ್ತರ ಪ್ರದೇಶ - ಶೇ.61.12
ಪುದುಚೇರಿ - ಶೇ.75.7


