ತನಿಖಾ ತಂಡದ ಕಸ್ಟಡಿಯಲ್ಲಿದ್ದಾಗ ಅನುಭವಿಸಿದ ಕಿರುಕುಳ ನೆನೆದು 'ಕಣ್ಣೀರಿಟ್ಟ' ಸಾಧ್ವಿ ಪ್ರಗ್ಯಾ

ಮಾಲೆಂಗಾವ್ ಬಾಂಬ್ ಸ್ಫೋಟ ಪ್ರಕರಣದ ಆರೋಪ ಸಾಧ್ವಿ ಪ್ರಗ್ಯಾ ಠಾಕೂರ್ ತನಿಖಾ ತಂಡಗಳ ಕಸ್ಟಡಿಯಲ್ಲಿದ್ದಾಗ ಅನುಭವಿಸಿದ್ಧ ಕಿರುಕುಳವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಸಾಧ್ವಿ ಪ್ರಗ್ಯಾ ಠಾಕೂರ್
ಸಾಧ್ವಿ ಪ್ರಗ್ಯಾ ಠಾಕೂರ್

ಭೂಪಾಲ್ :  ಮಾಲೆಂಗಾವ್ ಬಾಂಬ್ ಸ್ಫೋಟ ಪ್ರಕರಣದ ಆರೋಪ ಸಾಧ್ವಿ ಪ್ರಗ್ಯಾ ಠಾಕೂರ್  ತನಿಖಾ ತಂಡಗಳ ಕಸ್ಟಡಿಯಲ್ಲಿದ್ದಾಗ ಅನುಭವಿಸಿದ್ಧ ಕಿರುಕುಳವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಮಧ್ಯಪ್ರದೇಶದ ಭೂಪಾಲ್ ನಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆದ ಸಾಧ್ವಿ ಪ್ರಗ್ಯಾ ಠಾಕೂರ್, ಅಕ್ರಮವಾಗಿ ನನನ್ನು ಕರೆದುಕೊಂಡು ಹೋಗಿ 13 ದಿನಗಳ ಕಾಲ ಬಂಧನದಲ್ಲಿಟ್ಟಿದ್ದರು.ಮೊದಲ ದಿನವೇ  ಹೊಡೆಯಲು ಆರಂಭಿಸಿದರು.ಬೆಲ್ಟ್ ನಿಂದ ಹೊಡೆಯುತ್ತಿದ್ದರಿಂದ ಇಡೀ ನರವ್ಯವಸ್ಥೆಯೇ ನಿಷ್ಕ್ರೀಯಗೊಂಡಂತಾಗಿತ್ತು. ರಾತ್ರಿ , ಹಗಲು ಎನ್ನದೇ ಯಾವಾಗಲೂ ಹೊಡೆಯಲಾಗುತಿತ್ತು ಎಂದು ತಿಳಿಸಿದರು.

ನನಗೆ ಹೊಡೆಯುತ್ತಲೇ ನಿಂದಿಸಲಾಗುತಿತ್ತು, ನೇಣು ಹಾಕುವುದಾಗಿ, ಬಟ್ಟೆ ಬಿಚ್ಚುವಂತೆ ಬೆದರಿಕೆ ಹಾಕಲಾಗಿತ್ತು. ತನಿಖಾ ತಂಡದ ಕಸ್ಟಡಿಯಲ್ಲಿದ್ದಾಗ ಅನುಭವಿಸಿದ್ದ ಕಿರುಕುಳವನ್ನು ಅಸಹನೀಯವಾಗಿತ್ತು ಎಂದು ಸಾಧ್ವಿ ಪ್ರಗ್ಯಾ ಠಾಕೂರ್ ಕಣ್ಣೀರಿಟ್ಟರು.

ನನ್ನ ನೋವನ್ನು ನಿಮ್ಮ ಮುಂದೆ ಹೇಳಿಕೊಳ್ಳುತ್ತಿಲ್ಲ ಆದರೆ, ನಾನು ಅನುಭವಿಸಿದ್ದ ನೋವನ್ನು ಯಾವುದೇ ತಂಗಿಯರು ಅನುಭವಿಸಬಾರದು ,ನಾನು ಯಾವುದೇ ಭ್ರಷ್ಟಾಚಾರ ನಡೆಸಿಲ್ಲ. ಯಾರ ಅಧಿಕಾರವನ್ನು ಕಬಳಿಸಿಲ್ಲ. ಆದರೂ ವಿನಾಕಾರಣ ತೊಂದರೆ ನೀಡಲಾಯಿತು. ರಾಷ್ಟ್ರವಾದದ, ರಾಷ್ಟ್ರದ ಬಗ್ಗೆ ಮಾತನಾಡಬಾರದು ಎಂದು ತಾಕೀತು ಮಾಡುತ್ತಿದ್ದರು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com