
ಅಮೇಥಿ: ಜನರಿಗೆ ಶೂ, ಸೀರೆ, ಹಣ ವಿತರಣೆಗೆ ಸಂಬಂಧಿಸಿದಂತೆ ಅಮೇಥಿಯಲ್ಲಿನ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ. ಜನರ ಸಮಸ್ಯೆಗಳನ್ನು ಈ ರೀತಿಯಲ್ಲಿ ಪರಿಹರಿಸುವ ಬದಲು ರಾಷ್ಟ್ರೀಯತೆಯಿಂದ ಪರಿಹರಿಸಬಹುದು ಎಂದು ಹೇಳಿದ್ದಾರೆ.
ನೆಹರೂ- ಗಾಂಧಿ ಪ್ರಾಬಲ್ಯತೆ ಹೆಚ್ಚಾಗಿರುವ ಅಮೇಥಿ ಹಾಗೂ ರಾಯ್ ಬರೇಲಿ ಕ್ಷೇತ್ರದಲ್ಲಿ ಮಾಧ್ಯಮಗಳ ಮುಂದೆಯೇ ಜನರಿಗೆ ಶೂ, ಸೀರೆ ಹಣ ಹಂಚುವುದು ಸರಿಯಲ್ಲ, ನನಗೆ 12 ವರ್ಷ ವಯಸ್ಸು ಇದ್ದಾಗಿನಿಂದಲೂ ಇಲ್ಲಿಗೆ ಬರುತ್ತಿದ್ದು ಅಮೇಥಿಯ ಜನರು ಯಾವುದಕ್ಕೂ ಯಾರ ಬಳಿಯೂ ಕೈ ಚಾಚಲ್ಲ . ಅಮೇಥಿ ಹಾಗೂ ರಾಯ್ ಬರೇಲಿ ಎರಡು ಕ್ಷೇತ್ರಗಳ ಜನರ ಬಗ್ಗೆ ಹೆಮ್ಮೆಯಿದೆ ಎಂದಿದ್ದಾರೆ.
ಅಮೇಥಿ ಕ್ಷೇತ್ರದ ಕೆಲವು ಹಳ್ಳಿಗಳಲ್ಲಿ ಸ್ಮೃತಿ ಇರಾನಿ ಶೂಗಳನ್ನು ವಿತರಿಸಿದ್ದು, ಇವುಗಳನ್ನು ಹಾಕಿದ್ದ ಜನರನ್ನು ನೋಡಿದ್ದ ನಂತರ ಪ್ರಿಯಾಂಕಾ ಗಾಂಧಿ ವಾದ್ರಾ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಉದ್ಯೋಗ, ಶಿಕ್ಷಣ, ಮಹಿಳೆಯರ ಸುರಕ್ಷತೆ ಹಾಗೂ ಆರೋಗ್ಯ ಪ್ರಮುಖ ಸಮಸ್ಯೆಗಳಾಗಿವೆ. ರಾಷ್ಟ್ರೀಯತೆಯಿಂದ ಜನರ ಸಮಸ್ಯೆಗಳನ್ನು ಬಗಹರಿಸಬಹುದು, ಆದರೆ, ಇಲ್ಲಿನ ಸಮಸ್ಯೆಗಳ ಬಗ್ಗೆ ಜನರು ಕೇಳಿದಾಗ ಬಿಜೆಪಿಯವರು ಕೇಳುತ್ತಿಲ್ಲ ಎಂದು ಆರೋಪಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸಿರುವ ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಮೇ 6 ರಂದು ಇಲ್ಲಿ ಚುನಾವಣೆ ನಡೆಯಲಿದೆ.
Advertisement