'ಆಗ ಅಡ್ವಾಣಿಯನ್ನು ಬಲವಂತವಾಗಿ ಮಾರ್ಗದರ್ಶಕ ಮಂಡಳಿಗೆ ತಳ್ಳಿದರು, ಈಗ ಅವರ ಕ್ಷೇತ್ರವನ್ನು ಕಸಿದುಕೊಂಡರು'

ಬಿಜೆಪಿ ಹಿರಿಯ ಮುಖಂಡ ಎಲ್ .ಕೆ ಆಡ್ವಾಣಿ ಅವರು ಆರು ಬಾರಿ ಪ್ರತಿನಿಧಿಸಿದ್ದ ಗುಜರಾತ್ ನ ಗಾಂಧಿನಗರ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ಟೀಯ ಅಧ್ಯಕ್ಷ ಅಮಿತ್ ಶಾ...
ಎಲ್.ಕೆ ಆಡ್ವಾಣಿ
ಎಲ್.ಕೆ ಆಡ್ವಾಣಿ
ನವದೆಹಲಿ: ಬಿಜೆಪಿ ಹಿರಿಯ ಮುಖಂಡ ಎಲ್ .ಕೆ ಆಡ್ವಾಣಿ ಅವರು ಆರು ಬಾರಿ ಪ್ರತಿನಿಧಿಸಿದ್ದ ಗುಜರಾತ್ ನ ಗಾಂಧಿನಗರ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ಟೀಯ ಅಧ್ಯಕ್ಷ ಅಮಿತ್ ಶಾ ಸ್ಪರ್ಧಿಸಲಿದ್ದಾರೆ, ಲೋಕಸಭೆ ಚುನಾವಣೆಗಾಗಿ ಬಿಜೆಪಿ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಗಾಂಧಿ ನಗರ ಕ್ಷೇತ್ರದಿಂದ ಅಮಿತ್ ಶಾ ಹೆಸರು ಪ್ರಕಟಿಸಲಾಗಿದೆ.
ಮೊದಲಿಗೆ ಅಡ್ವಾಣಿ ಅವರನ್ನು ಬಲವಂತವಾಗಿ ಮಾರ್ಗದರ್ಶಕ ಮಂಡಳಿಗೆ ತಳ್ಳಿದರು, ಈಗ ಅವರ ಸಂಸತ್ ಕ್ಷೇತ್ರವನ್ನೂ ಕಸಿದುಕೊಳ್ಳಲಾಗಿದೆ, ಹಿರಿಯರಿಗೆ ಗೌರವ ಕೊಡುವುದೇ ಗೊತ್ತಿಲ್ಲದೇ ಮೋದಿ ಜನರ ವಿಶ್ವಾಸವನ್ನು ಹೇಗೆ ಉಳಿಸಿಕೊಳ್ಳುವರು ಎಂದು ಕಾಂಗ್ರೆಸ್ ಟೀಕಿಸಿದೆ.
ಬಿಜೆಪಿ ಗುರುವಾರ ಮೊದಲ ಹಂತದಲ್ಲಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 184 ಅಭ್ಯರ್ಥಿಗಳ ಹೆಸರಿದೆ,. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ.
ಅಡ್ವಾಣಿ ಕ್ಷೇತ್ರದಿಂದ ಅಮಿತ್ ಶಾ ಕಣಕ್ಕಿಳಿಯುತ್ತಿರುವುದಕ್ಕೆ ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೆವಾಲಾ ಟೀಕಿಸಿದ್ದು, ಅಡ್ವಾಣಿ ಅವರ ಕ್ಷೇತ್ರವನ್ನು ಕಸಿದುಕೊಳ್ಳುವ ಮೂಲಕ ಅವರರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. 
2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಎಲ್ ಕೆ ಅಡ್ವಾಣಿ ಅವರನ್ನು ಬಿಜೆಪಿ ಮಾರ್ಗದರ್ಶಕ ಮಂಡಳಿಯ ಸದಸ್ಯರನ್ನಾಗಿ ನೇಮಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com