ಮುಂಬೈ: ಲೋಕಸಭೆ ಚುನಾವಣೆಗೆ ಶಿವಸೇನೆ ಮಹಾರಾಷ್ಟ್ರದಲ್ಲಿ ತನ್ನ ಪಾಲಿನ 23 ಅಭ್ಯರ್ಥಿಗಳ 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಮುಂಬೈ ದಕ್ಷಿಣದಿಂದ ಅರವಿಂದ್ ಸಾವಂತ್, ಮುಂಬೈ ಕೇಂದ್ರದಿಂದ ರಾಹುಲ್ ಶೆವಾಲೆ, ಮುಂಬೈ ಉತ್ತರದಿಂದ ಗಜಾನನ್ ಕಿರ್ತಿಕರ್ ಅವರನ್ನು ಶಿವಸೇನೆ ಕಣಕ್ಕಿಳಿಸಿದ. ಮುಂಬೈನ ಉಳಿದ ಮೂರು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡಲಾಗಿದೆ.
ಉಳಿದ ಎರಡು ಕ್ಷೇತ್ರಗಳಾದ ಸತಾರ ಮತ್ತು ಪಲ್ಘರ್ ಗೆ ಇನ್ನು ಎರಡು ದಿನದಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು ಎಂದು ಶಿವಸೇನಾ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರ ಕೈಗಾರಿಕಾ ಸಚಿವ ಸುಭಾಶ್ ದೇಸಾಯಿ ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಶೀವಸೇನೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು, 48 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಲ್ಲಿ ಶಿವಸೇನೆ ಹಾಗೂ 25 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುತ್ತಿವೆ.