ರಾಹುಲ್ ಪರಮಾಪ್ತ ಜಿತಿನ್ ಪ್ರಸಾದ್ ಬಿಜೆಪಿಗೆ ಸೇರ್ಪಡೆ?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪರಮಾಪ್ತರಾಗಿರುವ ಜಿತಿನ್ ಪ್ರಸಾದ್ ಸಧ್ಯವೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ವರದಿಗಳು ಹೇಳಿದೆ.
ಜಿತಿನ್ ಪ್ರಸಾದ್
ಜಿತಿನ್ ಪ್ರಸಾದ್
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪರಮಾಪ್ತರಾಗಿರುವ ಜಿತಿನ್ ಪ್ರಸಾದ್ ಸಧ್ಯವೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ವರದಿಗಳು ಹೇಳಿದೆ. ಒಂದು ವೇಳೆ ಈ ಸುದ್ದಿ ಸತ್ಯವಾಗಿದ್ದರೆ ಕಾಂಗ್ರೆಸ್ ಗೆ ಭಾರೀ ದೊಡ್ಡ ನಷ್ಟವೆನ್ನದೆ ಬೇರೆ ಮಾತಿಲ್ಲ.
ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಎರಡು ಬಾರಿ ಲೋಕಸಭೆ ಸಂಸದರಾಗಿದ್ದ ಜಿತಿನ್ ರಾಹುಲ್ ಗಾಂಧಿಯ ಅತ್ಯಂತ ನಿಕಟವರ್ತಿಯಾಗಿದ್ದಾರೆ.
2004 ಮತ್ತು 2009ರ ಲೋಕಸಭೆ ಚುನಾವಣೆಯಲ್ಲಿ ಷಹಜಹಾನ್ ಪುರ್  ಹಾಗೂ ಧೌರಾಹ್ರಾ ಕ್ಷೇತ್ರಗಳಿಂದ ಜಯಿಸಿ ಸಂಸದರಾಗಿದ್ದರು.
ಜಿತಿನ್ ಪ್ರಸಾದ್  ಅವರ ಮನೆತನ ಬಹು ಹಿಂದಿನಿಂದಲೂ ಕಾಂಗ್ರೆಸ್ ಬೆಂಬಲಿಸುವ ಕುಟುಂಬವೇ ಆಗಿದ್ದು ಇವರ ಅಜ್ಜ ಜ್ಯೋತಿ ಪ್ರಸಾದ್ ಸಹ ಕಾಂಗ್ರೆಸ್ ನ ಸದಸ್ಯರಾಗಿದ್ದರು. ತಂದೆ ಜಿತೇಂದ್ರ ಪ್ರಸಾದ್ ಸಹ ಪಕ್ಷದ ಉಪಾಧ್ಯಕ್ಷರಾಗಿದ್ದರಲ್ಲದೆ ರಾಜೀವ್ ಗಾಂಧಿ, ಪಿವಿ ನರಸಿಂಹರಾವ್ ಅವರುಗಳಿಗೆ ರಾಅಕೀಯ ಸಲಹೆಗಾರರಾಗಿದ್ದರು.
2000ರಲ್ಲಿ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷೆಯಾಗುವ ವೇಳೆ ಜಿತೇಂದ್ರ ಅವರು ಸೋನಿಯಾ ಅವರ ಎದುರಾಳಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com