ಭಾರತದ ಬಡತನದ ಮೇಲೆ ಸರ್ಜಿಕಲ್ ದಾಳಿ ನಡೆಸುತ್ತೇವೆ. ಬಡತನ ನಿರ್ಮೂಲನೆಗಾಗಿ ಪ್ರತಿವರ್ಷ ಬಡವರ ಖಾತೆಗೆ ವಾರ್ಷಿಕ 72,000 ರೂ.ಗಳನ್ನು ನೇರವಾಗಿ ಜಮೆ ಮಾಡುವ ಯೋಜನೆಯನ್ನು ತರುತ್ತೇವೆ. ನ್ಯಾಯ್ ಎಂಬ ಹೆಸರಿನ ಯೋಜನೆಯಡಿ ಭಾರತದ 5 ಕೋಟಿ ಬಡವರು ಇದರ ಫಲಾನುಭವಿಗಳಾಗಲಿದ್ದಾರೆ. ಇದು ನಮ್ಮ ಕನಸಿನ ಯೋಜನೆಯಾಗಿದ್ದು, ಭಾರತದ ಬಡತನ ನಿರ್ಮೂಲನೆಗೆ ಅಂತಿಮ ದಾಳಿ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಘೋಷಿಸಿದ್ದರು.