ಜಮ್ಮು-ಕಾಶ್ಮೀರದ ಸಮಸ್ಯೆಗಳಿಗೆ ಕಾಂಗ್ರೆಸ್,ಎನ್ ಸಿ,ಪಿಡಿಪಿ ಹೊಣೆ- ಪ್ರಧಾನಿ ಮೋದಿ

ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಜನತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾಂಗ್ರೆಸ್, ನ್ಯಾಷನಲ್ ಕಾನ್ಪೆರೆನ್ಸ್, ಮತ್ತು ಪಿಡಿಪಿ ಪಕ್ಷಗಳು ಹೊಣೆಗಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಜಮ್ಮು- ಕಾಶ್ಮೀರ: ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಜನತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾಂಗ್ರೆಸ್, ನ್ಯಾಷನಲ್ ಕಾನ್ಪೆರೆನ್ಸ್,  ಮತ್ತು ಪಿಡಿಪಿ ಪಕ್ಷಗಳು ಹೊಣೆಗಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ

ಅಂತಾರಾಷ್ಟ್ರೀಯ ಗಡಿ ಪ್ರದೇಶ ಅಕ್ನೋರ್ ನಲ್ಲಿಂದು ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಈ ಪಕ್ಷಗಳು ಕೇವಲ ಅಧಿಕಾರಕ್ಕಾಗಿ ಮುತುವರ್ಜಿ ವಹಿಸಿದ್ದರೆ ವಿನಾಹ  ದೇಶದ ಭದ್ರತೆಗೆ ಆದ್ಯತೆ ನೀಡಲಿಲ್ಲ.ಇದರಿಂದಾಗಿ ಕಾಶ್ಮೀರದ ಪಂಡಿತರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದರು.

ಭಾರತದ ಸರ್ಜಿಕಲ್ ಸ್ಟ್ರೈಕ್ ಹಾಗೂ ವಾಯುದಾಳಿ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಗಡಿ ಪ್ರದೇಶದಲ್ಲಿ ಉಗ್ರರ ಕಾರ್ಖಾನೆ ನಡೆಸುತ್ತಿದ್ದವರು ಇಂದು ಭಯ ಪಡುವಂತಾಗಿದೆ. ಇದೇ ಮೊದಲ ಬಾರಿಗೆ  ಭಾರತದ ಮೇಲೆ ದಾಳಿ ಮಾಡಲು ಉಗ್ರರು 100 ಬಾರಿ ಯೋಚನೆ ಮಾಡುವಂತಾಗಿದೆ ಎಂದು ಮೋದಿ ತಿಳಿಸಿದರು.

ಪಾಕಿಸ್ತಾನ ವಿರುದ್ಧದ ಹೋರಾಟದ ಬಗ್ಗೆ ಇಡೀ ದೇಶ ಒಂದೇ ಮಾತು ಹೇಳುತ್ತಿದ್ದರೆ, ಕಾಂಗ್ರೆಸ್ ಭಿನ್ನ ರೀತಿಯಲ್ಲಿ ಹೇಳುತ್ತಿದೆ.ಬಾಲಕೋಟ್ ದಾಳಿ ನಂತರ ಕಾಂಗ್ರೆಸ್ ನಾಯಕರು ದೇಶದ ಪರವಾಗಿ ಮಾತನಾಡುತ್ತಿಲ್ಲ, ಕಾಂಗ್ರೆಸ್ , ನ್ಯಾಷನಲ್ ಕಾನ್ಪೆರೆನ್ಸ್, ಪಿಡಿಪಿ ಹೇಳುವುದನ್ನ ಕೇಳುತ್ತೀರಾ?  ಪಾಕಿಸ್ತಾನ ಪರ ಹೇಳಿಕೆಗಳನ್ನು ಭಾರತೀಯ ನಾಗರಿಕರು ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com