ಊರ್ಮಿಳಾ ಮಾತೋಂಡ್ಕರ್
ಊರ್ಮಿಳಾ ಮಾತೋಂಡ್ಕರ್

ಮುಂಬಯಿ ಉತ್ತರ ಕ್ಷೇತ್ರದಿಂದ 'ರಂಗೀಲಾ' ಬೆಡಗಿ ಊರ್ಮಿಳಾ ಮಾತೋಂಡ್ಕರ್ ಸ್ಪರ್ಧೆ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಮುಂಬಯಿ ಉತ್ತರ ...
ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಮುಂಬಯಿ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಕಾಂಗ್ರೆಸ್‌ ಸೆಂಟ್ರಲ್‌ ಇಲೆಕ್ಷನ್‌ ಕಮಿಟಿಯ ಸಭೆಯಲ್ಲಿ ಊರ್ಮಿಳಾ ಅವರನ್ನು ಮುಂಬಯಿ ಉತ್ತರ ಕ್ಷೇತ್ರದಿಂದ ಲೋಕಸಭಾ ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂಬಯಿ ಉತ್ತರ ಕ್ಷೇತ್ರದಲ್ಲಿ ಮಾತೋಂಡ್ಕರ್‌ ಅವರು ಬಿಜೆಪಿಯ ಹಾಲಿ ಸಂಸದ ಗೋಪಾಲ್‌ ಶೆಟ್ಟಿ ವಿರುದ್ಧ ಸೆಣಸಲಿದ್ದಾರೆ. ರಾಹುಲ್ ಗಾಂಧಿ ಅವರ ಮೇಲಿನ ನಂಬಿಕೆಯಿಂದಾಗಿ ಕಾಂಗ್ರೆಸ್ ಸೇರಿದ್ದಾಗಿ ಊರ್ಮಿಳಾ  ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com