ದಿಗ್ವಿಜಯ್ ಸಿಂಗ್
ದೇಶ
ಪ್ರಗ್ಯಾ ಠಾಕೂರ್ ವಿವಾದಾತ್ಮಕ ಹೇಳಿಕೆಯಿಂದ ನಮಗೆ ಸಹಾಯ: ದಿಗ್ವಿಜಯ್
ಪ್ರಗ್ಯಾ ಠಾಕೂರ್ ವಿವಾದಾತ್ಮಕ ಹೇಳಿಕೆಯಿಂದ ನಮಗೆ ಸಹಾಯವಾಗಲಿದೆ ಎಂದು ಮಧ್ಯಪ್ರದೇಶ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ....
ಭೂಪಾಲ್: ಪ್ರಗ್ಯಾ ಠಾಕೂರ್ ವಿವಾದಾತ್ಮಕ ಹೇಳಿಕೆಯಿಂದ ನಮಗೆ ಸಹಾಯವಾಗಲಿದೆ ಎಂದು ಮಧ್ಯಪ್ರದೇಶ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಭೂಪಾಲ್ ನ ರ್ಯಾಲಿಯಲ್ಲಿ ಮಾತನಾಡಿದ ಅವರು, ನನ್ನ ವಿರೋಧಿಯಾಗಿ ಕಣಕ್ಕಿಳಿಸಲು ಬಿಜೆಪಿ ಗೆ ತಮ್ಮ ಪಕ್ಷದಲ್ಲಿ ಒಬ್ಬ ಯೋಗ್ಯ ಅಭ್ಯರ್ಥಿಯಿಲ್ಲ, ಹೀಗಾಗಿ ಸಾದ್ವಿಯೊಬ್ಬರನ್ನು ಕಣಕ್ಕಿಳಿಸಿದೆ. ಅವರನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ,
ಇತ್ತೀಚೆಗೆ ಪ್ರಗ್ಯಾ ಸಿಂಗ್ ನೀಡಿದ ವಿವಾದಾತ್ನಕ ಹೇಳಿಕೆ ಹಿನ್ನೆಲೆಯಲ್ಲಿ ಅವರನ್ನು 72 ಗಂಟೆಗಳ ಕಾಲ ಪ್ರಚಾರದಲ್ಲಿ ಭಾಗವಹಿಸದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ.ಪ್ರಚಾರದುದ್ದಕ್ಕೂ ಪ್ರಗ್ಯಾ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡುತ್ತಲಿರಲಿ, ಅವರ ಪ್ರಚಾರಕ್ಕೆ ಆಯೋಗ ನಿಷೇಧ ಹೇರುತ್ತಲಿರಲಿ, ಇದರಿಂದ ನಮಗೆ ತುಂಬಾ ಉಪಯೋಗವಾಗುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ