ಎನ್ ಸಿಪಿಗೆ ಹಾಕಿದ ಮತ ಬಿಜೆಪಿ ಪಾಲಾಗಿದ್ದನ್ನು ನಾನು ನೋಡಿದ್ದೆ: ಇವಿಎಂ ಬಗ್ಗೆ ಕಳವಳ ವ್ಯಕ್ತಪಡಿಸಿದ ಶರದ್ ಪವಾರ್

ಎಎಪಿ ಕಾಂಗ್ರೆಸ್ ಬಳಿಕ ಈಗ ಎನ್ ಸಿಪಿ ನಾಯಕರು ವಿದ್ಯುನ್ಮಾನ ಮತದಾನ ಯಂತ್ರಗಳನ್ನು (ಇವಿಎಂ ಚುನಾವಣೆಯಲ್ಲಿ ಬಳಕೆ ಮಾಡುವುದರ ಸಂಬಂಧ ಕಳವಳ ವ್ಯಕ್ತಪಡಿಸಿದ್ದಾರೆ.
ಶರದ್ ಪವಾರ್
ಶರದ್ ಪವಾರ್
ನವದೆಹಲಿ: ಎಎಪಿ ಕಾಂಗ್ರೆಸ್ ಬಳಿಕ ಈಗ ಎನ್ ಸಿಪಿ ನಾಯಕರು ವಿದ್ಯುನ್ಮಾನ ಮತದಾನ ಯಂತ್ರಗಳನ್ನು (ಇವಿಎಂ) ಚುನಾವಣೆಯಲ್ಲಿ ಬಳಕೆ ಮಾಡುವುದರ ಸಂಬಂಧ ಕಳವಳ ವ್ಯಕ್ತಪಡಿಸಿದ್ದಾರೆ. 
ಈ ಹಿಂದಿನ ಪ್ರಾತ್ಯಕ್ಷಿಕೆ ಸಮಯದಲ್ಲಿ ಇವಿಎಂ ನಲ್ಲಿ ನಾನು ನನ್ನ ಪಕ್ಷ ಎನ್ ಸಿಪಿಗೆ ಚಲಾಯಿಸಿದ್ದ ಮತ ಬಿಜೆಪಿಗೆ ಹೋಗಿದ್ದನ್ನು ಕಂಡಿದ್ದೆ ಎಂದು ಎನ್ ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ.
ಆದಾಗ್ಯೂ, ಎಲ್ಲ ಇವಿಎಂಗಳು ಈ ರೀತಿ ಕಾರ್ಯ ನಿರ್ವಹಿಸುತ್ತವೆಯೆಂದು ನಾನು ಭಾವಿಸುವುದಿಲ್ಲ ಎಂದು ಅವರು ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದರು.
"ನಾನು ಯಂತ್ರದ ಬಗ್ಗೆಯೂ ಸಹ ಕಾಳಜಿ ವಹಿಸುತ್ತೇನೆ. ಹೈದರಾಬಾದ್ ಮತ್ತು ಗುಜರಾತ್ ನಲ್ಲಿ ಕೆಲವು ಜನರು ಇವಿಎಂ ಅನ್ನು ನನ್ನ ಮುಂದೆ ಇಟ್ಟುಕೊಂಡು ಗುಂಡಿಯನ್ನು  ಒತ್ತಲು ಹೇಳಿದ್ದರು. ಆಗ ನಾನು ನಮ್ಮ ಪಕ್ಷದ ಚಿಹ್ನೆಯಾದ ಕೈಗಡಿಯಾರದ ಚಿತ್ರದ ಮುಂದಿನ ಬಟನ್ ಒತ್ತಿದೆ. ಆದರೆ ಆ ಮತ ಕಮಲ ಚಿಹ್ನೆಯ ಬಿಜೆಪಿಗೆ ಹೋಗಿತ್ತು. ನಾನಿದನ್ನು ಕಣ್ಣಾರೆ ನೋಡಿದೆ" ಪವಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com